ಶಿವಮೊಗ್ಗ: ಜಿಲ್ಲೆಯಲ್ಲಿ ವೈಯಕ್ತಿಕ ವಿಚಾರಕ್ಕೆ ಉಂಟಾದಂತ ಜಗಳ ತಾರಕಕ್ಕೇರಿದಂತ ವೇಳೆಯಲ್ಲಿ ಗುದ್ದಲಿಯಿಂದಲೇ ಹೊಡೆದು ಸ್ನೇಹಿತನನ್ನು ಕೊಂದಿರುವಂತ ಬೆಚ್ಚಿ ಬೀಳಿಸೋ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ ತಾವರೆಕೊಪ್ಪದಲ್ಲಿ ವೈಯಕ್ತಿಕ ವಿಚಾರಕ್ಕೆ ದೇವರಾಜ್ ಹಾಗೂ ವೆಂಕಟೇಶ್ ಎಂಬುವರ ನಡುವೆ ಜಗಳ ಉಂಟಾಗಿದೆ. ಜಗಳ ತಾರಕ್ಕೇರಿದಂತ ಸಂದರ್ಭದಲ್ಲಿ ಆರೋಪಿ ವೆಂಕಟೇಶ್ ಸ್ನೇಹಿತ ದೇವರಾಜನನ್ನು ಗುದ್ದಲಿಯಿಂದ ಹೊಡೆದಿದ್ದಾನೆ.
ಗುದ್ದಲಿಯಿಂದ ಸ್ನೇಹಿತ ದೇವರಾಜ್(31) ಹೊಡೆದ ಪರಿಣಾಮ ಸ್ಥಳದಲ್ಲೇ ತೀವ್ರ ರಕ್ತಸ್ತ್ರಾವದಿಂದ ಸಾವನ್ನಪ್ಪಿದ್ದಾನೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಶಿವಮೊಗ್ಗ ಗ್ರಾಮಾಂತರ ಠಾಣೆಯ ಪೊಲೀಸರು ಆರೋಪಿ ವೆಂಕಟೇಶ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
BREAKING: ಬಿಸಿಲಿನ ತಾಪಮಾನ ಹಿನ್ನಲೆ: ರಾಜ್ಯ ಸರ್ಕಾರದಿಂದ ‘ಸರ್ಕಾರಿ ಕಚೇರಿ’ ಕೆಲಸದ ಸಮಯ ಬದಲಿಸಿ ಆದೇಶ