ಹಾಸನ: ಜಿಲ್ಲೆಯಲ್ಲಿ ಕುಡಿದ ನಶೆಯಲ್ಲಿ ತಂದೆಯೊಂದಿಗೆ ಜಗಳವಾಡಿದಂತ ಪುತ್ರನೊಬ್ಬ, ಅದೇ ನಶೆಯಲ್ಲಿ ತಂದೆಯನ್ನೇ ಕೊಲೆಗೈದಿರುವು ಘಟನೆ ನಡೆದಿದೆ. ಕೊಲೆಗೈದ ಬಳಿಕ ಹೃದಯಾಘಾತವಾಗಿದೆ ಅಂತ ಹೇಳಿ, ಆಸ್ಪತ್ರೆಗೆ ಕೊಂಡೊಯ್ದು, ಆ ಬಳಿಕ ಅಂತ್ಯಸಂಸ್ಕಾರಕ್ಕೆ ಶವವನ್ನು ಕೊಂಡೊಯ್ದ ಸಂದರ್ಭದಲ್ಲೇ ಪುತ್ರನ ತಾಯಿ ದೂರು ನೀಡಿದ್ದಾರೆ. ಈ ಬಳಿಕ ಕೊಲೆಯ ನಾಟಕ ಬಯಲಾಗಿದೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ಕುಡಿದ ನಶೆಯಲ್ಲಿ ದಿನೇಶ್ ಹಾಗೂ ಆತನ ತಂದೆ ಶಶಿಧರ್(58) ಎಂಬುವರ ನಡುವೆ ಜಗಳ ಉಂಟಾಗಿದೆ. ಜಗಳ ತಾರಕಕ್ಕೇರಿದಂತ ಸಂದರ್ಭದಲ್ಲಿ ತಂದೆ ಶಶಿಧರ್ ನನ್ನು ಪುತ್ರ ದಿನೇಶ್ ಕೊಲೆಗೈದಿದ್ದಾನೆ. ಈ ಘಟನೆಯನ್ನು ಕಣ್ಣೆದುರಿಗೆ ನೋಡಿದಂತ ಆತನ ತಾಯಿ ಮನೆಯಿಂದ ಸಹೋದರನ ಮನೆಗೆ ಹೋಗಿ ತಿಳಿಸಿದ್ದಾಳೆ.
ಇತ್ತ ದಿನೇಶ್ ತಂದೆಯನ್ನು ಕೊಲೆಗೈದ ಬಳಿಕ ಹೃದಯಾಘಾತವಾಗಿದೆ ಅಂತ ನಾಟಕ ಮಾಡಿ, ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಫಲಿಸಲಿಲ್ಲ. ಸಾವನ್ನಪ್ಪಿದ್ದಾರೆ ಅಂತ ಊರಿಗೆ ತಂದು ಶವಸಂಸ್ಕಾರಕ್ಕೆ ರೆಡಿ ಮಾಡಿದ್ದಾನೆ. ಆದರೇ ಶಶಿಧರ್ ಪತ್ನಿ ಅರೇಹಳ್ಳಿ ಠಾಣೆಗೆ ಸಹೋದರನ ಜೊತೆಗೆ ತೆರಳಿ, ತನ್ನ ಮಗನೇ ಜಗಳವಾಡಿ ಕೊಲೆಗೈದ ವಿಚಾರದವನ್ನು ತಿಳಿಸಿ ದೂರು ನೀಡಿದ್ದಾರೆ.
ಶಶಿಧರ್ ಪತ್ನಿಯ ದೂರು ಪಡೆದು, ಅರೇಹಳ್ಳಿ ಪೊಲೀಸರು ದಿನೇಶ್ ಬಂಧಿಸಿ, ವಿಚಾರಣೆ ನಡೆಸಿದಾಗ ಕೊಲೆಯ ವಿಚಾರ ಬೆಳಕಿಗೆ ಬಂದಿದೆ. ಇದೀಗ ಹಾಸನದ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BREAKING : ಬೆಂಗಳೂರಲ್ಲಿ ಮತ್ತೊಂದು ಭೀಕರ ಅಪಘಾತ : ‘BBMP’ ಕಸದ ಲಾರಿ ಹರಿದು ಇಬ್ಬರು ಮಹಿಳೆಯರ ಸಾವು!
BREAKING : ಭಾರತದ ಖ್ಯಾತ ಭೌತಶಾಸ್ತ್ರಜ್ಞ `ರಾಜಗೋಪಾಲ ಚಿದಂಬರಂ’ ವಿಧಿವಶ | Rajagopala Chidambaram