ಚಿಕ್ಕಬಳ್ಳಾಪುರ: ಮದ್ಯ ಸೇವಿಸಲು ಹಣ ಕೊಡಲಿಲ್ಲವೆಂದು ತಂದೆಯನ್ನೇ ಪುತ್ರನೊಬ್ಬ ಹೊಡೆದು ಕೊಂದಿರುವಂತ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ನೆಹರು ನಗರದಲ್ಲಿ ಈ ದುಷ್ಕೃತ್ಯವನ್ನು ಎಸಗಲಾಗಿದೆ. ತಂದೆ 55 ವರ್ಷದ ಗಂಗಣ್ಣನನ್ನು ರಿಪೀಸ್ ಪಟ್ಟಿಯಿಂದ ಹೊಡೆದು ಪುತ್ರ ಸಂಜಯ್ ಕುಮಾರ್ ಕೊಂದಿದ್ದಾನೆ.
ಕುಡಿಯೋದಕ್ಕೆ ದುಡ್ಡು ಕೊಡಲಿಲ್ಲ ಎನ್ನುವ ಕಾರಣಕ್ಕೆ ತಂದೆ ಗಂಗಣ್ಣ ಹಾಗೂ ಪುತ್ರ ಸಂಜಯ್ ಕುಮಾರ್ ನಡುವೆ ಗಲಾಟೆಯಾಗಿದೆ. ಈ ವೇಳೆಯಲ್ಲಿ ರಿಪೀಸ್ ನಿಂದ ಹೊಡೆದು ತಂದೆಯನ್ನು ಕೊಂದಿದ್ದಾನೆ. ಆ ಬಳಿಕ ತಂದೆಯ ಶವಸಂಸ್ಕಾರಕ್ಕೆ ಸಂಜಯ್ ಕುಮಾರ್ ಮುಂದಾಗಿದ್ದಾನೆ.
ವಿಚಾರ ತಿಳಿದಂತ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಆಧರಿಸಿ ಸ್ಥಳಕ್ಕೆ ಗೌರಿಬಿದನೂರು ಠಾಣೆಯ ಪೊಲೀಸರು ಆಗಮಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆಯಲ್ಲಿ ತಾನೇ ಅಪ್ಪನನ್ನು ಕೊಂದಿರೋದಾಗಿ ಪುತ್ರ ತಪ್ಪೊಪ್ಪಿಕೊಂಡಿದ್ದಾನೆ. ಹೀಗಾಗಿ ಆರೋಪಿ ಸಂಜಯ್ ಕುಮಾರ್(25) ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಗೌರಿಬಿದನೂರು ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾರ್ವಜನಿಕರೇ ಎಚ್ಚರ! ‘ಮಕ್ಕಳ ಮಾರಾಟ’ ಅಪರಾಧ! ಸಿಕ್ಕಿ ಬಿದ್ರೆ 5 ವರ್ಷ ‘ಜೈಲು ಶಿಕ್ಷೆ ಫಿಕ್ಸ್’
BREAKING: ರೇಣುಕಾಸ್ವಾಮಿ ಕೊಲೆ ಕೇಸ್: ತಮ್ಮ ವಿರುದ್ಧ ಆರೋಪ ನಿರಾಕರಿಸಿದ ನಟ ದರ್ಶನ್ ಅಂಡ್ ಗ್ಯಾಂಗ್








