ಚಿತ್ರದುರ್ಗ: ತನಗೆ ಮದುವೆ ಮಾಡಲಿಲ್ಲವೆಂದು ತಂದೆಯೊಂದಿಗೆ ದಿನವೂ ಪುತ್ರನೊಬ್ಬ ಜಗಳ ಮಾಡುತ್ತಿದ್ದನಂತೆ. ಈ ವಿಚಾರವಾಗಿ ಅಣ್ಣ, ಅಕ್ಕ, ತಾಯಿ, ಕುಟುಂಬಸ್ಥರು ಎಷ್ಟೇ ಬುದ್ದಿವಾದ ಹೇಳಿದರೂ ಜಗಳ ಮಾತ್ರ ನಿಲ್ಲಿಸಿಲ್ಲ. ಇದೇ ವಿಚಾರಕ್ಕೆ ಸಿಟ್ಟಾಗಿದ್ದ ಪುತ್ರನೊಬ್ಬ ತಂದೆ ಮಲಗಿದ್ದ ವೇಳೆ ರಾಡ್ ನಿಂದ ತಲೆಗೆ ಹೊಡೆದು ಹತ್ಯೆಗೈದಿರುವಂತ ಘಟನೆ ಹೊಸದುರ್ಗ ತಾಲ್ಲೂಕಿನ ಅತ್ತಿಘಟ್ಟದಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಅತ್ತಿಘಟ್ಟ ಗ್ರಾಮದ ಸಣ್ಣನಿಂಗಪ್ಪ ಎಂಬುವರೇ ಪುತ್ರ ನಿಂಗರಾಜನಿಂದ ಹತ್ಯೆಯಾದಂತ ತಂದೆಯಾಗಿದ್ದಾರೆ. ಮೃತ ಸಣ್ಣನಿಂಗಪ್ಪನಿಗೆ ಮೂವರು ಮಕ್ಕಳು. ಹಿರಿಯ ಮಗ ಮಾರುತಿಯಾಗಿದ್ದರೇ, ಎರಡನೇ ಮಗ ನಿಂಗರಾಜ, ಕಿರಿಯ ಮಗಳು ಜ್ಯೋತಿ. ಮಾರುತಿ ಹಾಗೂ ಜ್ಯೋತಿಗೆ ಮದುವೆಯಾಗಿತ್ತು. ಎರಡನೇ ಮಗ ನಿಂಗರಾಜ ಮದುವೆ ಆಗಿರಲಿಲ್ಲ.
ನಿನ್ನೆ ನಿಂಗರಾಜ ಮದುವೆ ಮಾಡದ ವಿಚಾರಕ್ಕೆ ತಂದೆ ಸಣ್ಣ ನಿಂಗಪ್ಪ ಜೊತೆಗೆ ಜಗಳ ಮಾಡಿದ್ದಾನೆ. ಈ ವೇಳೆ ಹೊಸದುರ್ಗದಲ್ಲಿ ಇದ್ದಂತ ಹಿರಿಯ ಮಗ ಮಾರುತಿಯನ್ನು ಮನೆಗೆ ಕರೆದು ಬುದ್ದಿ ಹೇಳಿಸಿದ್ದಾರೆ. ಆಗ ಸುಮ್ಮನೇ ಆಗಿದ್ದಂತ ನಿಂಗರಾಜ, 11 ಗಂಟೆಯ ಸುಮಾರಿಗೆ ಮನೆಯಲ್ಲಿ ಮಲಗಿದ್ದಂತ ತಂದೆ ಸಣ್ಣನಿಂಗಪ್ಪನಿಗೆ ಟ್ರ್ಯಾಕ್ಟರ್ ರಾಡ್ ನಿಂದ ತಲೆ ಹೊಡೆದು ಪರಾರಿ ಆಗಿದ್ದಾನೆ.
ಚೀರಾಟ ಕೇಳಿ ಕುಟುಂಬಸ್ಥರು ಹಲ್ಲೆಗೆ ಒಳಗಾಗಿ ತೀವ್ರ ರಕ್ತ ಸ್ತ್ರಾವಗೊಂಡಿದ್ದಂತ ಸಣ್ಣ ನಿಂಗಪ್ಪನನ್ನು ಹೊಸದುರ್ಗ ತಾಲ್ಲೂಕು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಪರೀಕ್ಷೆ ನಡೆಸಿದಂತ ವೈದ್ಯರು ಸಣ್ಣ ನಿಂಗಪ್ಪ ಮೃತ ಪಟ್ಟಿರುವ ವಿಷಯವನ್ನು ಖಚಿತ ಪಡಿಸಿದ್ದಾರೆ.
ಹಿರಿಯ ಮಗ ಮಾರುತಿ, ಹೊಸದುರ್ಗ ಪೊಲೀಸ್ ಠಾಣೆಗೆ ತೆರಳಿ ತಮ್ಮ ನಿಂಗರಾಜ, ತಂದೆ ಸಣ್ಣ ನಿಂಗಪ್ಪನನ್ನು ರಾಡ್ ನಿಂದ ಹೊಡೆದು ಹತ್ಯೆ ಮಾಡಿದ್ದಾಗಿ ದೂರು ನೀಡಿದ್ದಾರೆ. ಈ ದೂರು ದಾಖಲಿಸಿಕೊಂಡ ಹೊಸದುರ್ಗ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಕೆ.ಟಿ.ರಮೇಶ್ ನೇತೃತ್ವದಲ್ಲಿ ಪಿಎಸ್ಐ ಮಹೇಶ್ ಕುಮಾರ್.ಎಸ್, ಕ್ರೈಂ ಪಿಸಿ ರಮೇಶ್ ಕೊಲೆ ಆರೋಪಿ ನಿಂಗರಾಜ ಬಂಧಿಸಿ ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ.., ಸಂಪಾದಕರು..








