ಬೆಂಗಳೂರು: ನಗರದಲ್ಲಿ ಪತ್ನಿಯನ್ನು ಕೊಂದಿರುವಂತ ಪಾಪಿ ಪತಿಯೊಬ್ಬ, ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಸೂಕ್ ಕೇಸ್ ನಲ್ಲಿ ತುಂಬಿಟ್ಟಿರೋದಾಗಿ ತಿಳಿದು ಬಂದಿದೆ.
ಮಹಾರಾಷ್ಟ್ರ ಮೂಲದ ವ್ಯಕ್ತಿಯೊಬ್ಬ ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಕನ್ನಹಳ್ಳಿಯಲ್ಲಿ ವಾಸವಿದ್ದನು. ಇಂತಹ ವ್ಯಕ್ತಿ ತನ್ನ ಪತ್ನಿಯನ್ನು ಕೊಂದು, ದೇಹವನ್ನು ಕತ್ತರಿಸಿ ಸೂಟ್ ಕೇಸ್ ನಲ್ಲಿ ತುಂಬಿಟ್ಟಿದ್ದಾಗೆ ಪತ್ನಿಯ ಪೋಷಕರಿಗೆ ಕರೆ ಮಾಡಿ ತಿಳಿಸಿದ್ದಾನೆ.
ಈ ವಿಷಯವನ್ನು ಮಹಾರಾಷ್ಟ್ರದಲ್ಲಿದ್ದಂತ ಪೋಷಕರು, ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಮಹಾರಾಷ್ಟ್ರದ ಪೊಲೀಸರು ಹುಳಿಮಾವು ಠಾಣೆಯ ಪೊಲೀಸರಿಗೆ ದೊಡ್ಡಕನ್ನಹಳ್ಳಿಗೆ ತೆರಳಿ ಶೋಧಿಸುವಂತೆ ಕೋರಿದ್ದಾರೆ.
ಮಹಾರಾಷ್ಟ್ರ ಪೊಲೀಸರ ಕೋರಿಕೆಯ ಮೇರೆಗೆ ಬೆಂಗಳೂರಿನ ಹುಳಿಮಾವು ಠಾಣೆಯ ಪೊಲೀಸರು ದೊಡ್ಡಕನ್ನಹಳ್ಳಿಯ ಆರೋಪಿ ಮನೆಗೆ ತೆರಳಿ ಶೋಧಕಾರ್ಯ ನಡೆಸುತ್ತಿದ್ದಾರೆ. ಆರೋಪಿ ಪತ್ನಿಯನ್ನು ಕೊಂದು ಸೂಟ್ ಕೇಸ್ ನಲ್ಲಿ ತುಂಬಿದ್ದಾನೋ ಅಥವಾ ಬೇರೆ ಏನಾದರೂ ಮಾಡಿದ್ದಾನೋ ಎಂಬುದಾಗಿ ತಿಳಿದು ಬರಬೇಕಿದೆ.
ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅವ್ಯವಹಾರ ಕೇಸ್: ಇಡಿ ಸಮನ್ಸ್ ಪ್ರಶ್ನಿಸಿ ಆರ್.ಎಂ ಮಂಜುನಾಥಗೌಡ ಸಲ್ಲಿಸಿದ್ದ ಅರ್ಜಿ ವಜಾ
ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್ ತಡೆಗೆ HPV ಲಸಿಕೆ: ಸಚಿವ ದಿನೇಶ್ ಗುಂಡೂರಾವ್