ಬೆಂಗಳೂರು: ಹೊಸ ವರ್ಷವನ್ನು ಸ್ವಾಗತಿಸಲು ಸಿಲಿಕಾನ್ ಸಿಟಿ ಬೆಂಗಳೂರು ಸಜ್ಜಾಗುತ್ತಿದೆ. ಹೊಸ ವರ್ಷಾಚರಣೆಯ ವೇಳೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತಾ ದೃಷ್ಟಿಯಿಂದ ಪೊಲೀಸರು ಸಕಲ ಸಿದ್ಧತೆಯನ್ನು ಕೈಗೊಂಡಿದ್ದಾರೆ. ಪ್ರಮುಖವಾಗಿ ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಸೇರಿದಂತೆ ಇತರೆ ರಸ್ತೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಬೆಂಗಳೂರಲ್ಲಿ ಭದ್ರತೆಗಾಗಿ ಹೆಚ್ಚುವರಿ ಪೊಲೀಸ್ ಕಮೀಷನರ್ ಇಬ್ಬರು, ಜಂಟಿ ಪೊಲೀಸ್ ಕಮೀಷನರ್ ಒಬ್ಬರು, ಡಿಸಿಪಿ 15, ಎಸಿಪಿ 45, ಪಿಐ 135, ಪಿಎಸ್ಐ 530, ಎಎಸ್ಐ 655, ಹೆಚ್ ಸಿ, ಪಿಸಿ – 4,833, ಮಹಿಳಾ ಪೊಲೀಸ್ ಸಿಬ್ಬಂದಿ 1048, ಮಫ್ತಿ ಸಿಬ್ಬಂದಿ 597, ಹೋಂ ಗಾರ್ಡ್ 3170, ಸಿವಿಲ್ ಡಿಫೆನ್ಸ್ 800 ಸೇರಿದಂತೆ ಒಟ್ಟು 11,830 ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಇದಲ್ಲದೇ ಕೆ ಎಸ್ ಆರ್ ಪಿಯ 72 ತುಕಡಿ, ಕೆ ಎಸ್ ಆರ್ ಪಿ ಬೆಳಗಿನ ಗಸ್ತಿಗೆ 17 ತುಕಡಿ, ಸಿಎಎರ್ ರಾತ್ರಿ ಗಸ್ತಿಗೆ 21 ತುಕಡಿ, ಸಿಎಆರ್ ಬೆಳಗಿನ ಭದ್ರತೆಗಾಗಿ 2 ತುಕಡಿಯನ್ನು ಡಿಸೆಂಬರ್.31ರಂದು ನಿಯೋಜಿಸಲಾಗಿದೆ.
KSRTC ಬಸ್ ಚಾಲನೆ ವೇಳೆಯಲ್ಲೇ ಚಾಲಕನಿಗೆ ಫಿಟ್ಸ್: ಸರಣಿ ಅಪಘಾತದಲ್ಲಿ ಹಲವರಿಗೆ ಗಾಯ, ವಾಹನ ಜಖಂ
ಡಿ.31ರಂದು ಅಲ್ಲಿ ಇಲ್ಲಿ ಯಾಕೆ? ‘ಫ್ಯಾಮಿಲಿ ಸಹಿತ’ ಇಲ್ಲಿಗೆ ಹೋಗಿ, ಹೊಸ ವರ್ಷಾಚರಣೆ ಮಾಡಿ