ಬೆಂಗಳೂರು: ರಾಜ್ಯ ಸರ್ಕಾರದಿಂದ ನೈಸರ್ಗಿಕ ವಿಕೋಪಗಳಿಂದ ಸ್ಥಳೀಯವಾಗಿ ಉಂಟಾಗುವ ಬೆಳೆಹಾನಿ ಪ್ರಕರಣಗಳಲ್ಲಿ ನಿಯಮಾನುಸಾರ ಪರಿಹಾರವನ್ನು ಜಿಲ್ಲಾಧಿಕಾರಿಗಳ ಹಂತದಲ್ಲೇ ನೀಡುವಂತೆ ಮಹತ್ವದ ಆದೇಶವನ್ನು ಹೊರಡಿಸಿದೆ.
ಈ ಕುರಿತಂತೆ ಕಂದಾಯ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿಭಾರತೀಯ ಹವಾಮಾನ ಇಲಾಖೆಯು ಉಲ್ಲೇಖಿತ (1) ರ ದಿನಾಂಕ: 15.04.2024 ರಂದು ನೀಡಿರುವ ಮುನ್ಸೂಚನೆಯಲ್ಲಿ ನೈಋತ್ಯ ಮುಂಗಾರು-2024 ರ ಮೊದಲ ಹಂತದ ಕಾರ್ಯಚರಣೆಯ ಧೀರ್ಘ ವ್ಯಾಪ್ತಿಯ ಮುನ್ಸೂಚನೆಯ (LRF) ಪುಕಾರ ಒಟ್ಟಾರೆಯಾಗಿ ದೇಶದಾದ್ಯಂತ ಮಳೆಯು ಸಾಮಾನ್ಯಕ್ಕಿಂತ ಹೆಚ್ಚಾಗಿ ಇದ್ದು, ರಾಜ್ಯದಲ್ಲಿ ಮುಂಗಾರಿನ ಅವಧಿಯಲ್ಲಿ, ಇದುವರೆವಿಗೂ ವಾಡಿಕೆಯಾಗಿ 570 ಮಿ.ಮೀ., ಮಳೆಯಾಗಬೇಕಾಗಿದ್ದು ವಾಸ್ತವಿಕವಾಗಿ 704 ಮಿ.ಮೀ., ಮಳೆಯಾಗಿದ್ದು, ಶೇ.23ರಷ್ಟು ಹೆಚ್ಚು ಮಳೆಯಾಗಿರುತ್ತದೆ. ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳ ಉಂಟಾದಲ್ಲಿ ಸಂಭವಿಸಬಹುದಾದ ದುಷ್ಪರಿಣಾಮಗಳನ್ನು ಸಮರ್ಪಕವಾಗಿ/ಸಮರ್ಥಕವಾಗಿ ನಿಭಾಯಿಸಲು ಹಾಗೂ ಹಾನಿಯನ್ನು ತಗ್ಗಿಸಲು ಮುಂಗಾರು ಪೂರ್ವದಲ್ಲಿ ಪೂರ್ವ ಸಿದ್ಧತೆ / ಸನ್ನದ್ಧತೆ ಕ್ರಮಗಳನ್ನು ಕೈಗೊಳ್ಳಬೇಕಾಗಿದ್ದು, ಅದರಂತೆ ಎಲ್ಲಾ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಹಂತದ ಅಧಿಕಾರಿಗಳೊಂದಿಗೆ ಪೂರ್ವ ಸಿದ್ಧತೆ ಸಭೆಗಳನ್ನು ನಡೆಸಿ, ಕೈಗೊಳ್ಳಬೇಕಾಗಿರುವ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿಗಧಿಪಡಿಸಿ ಹಾಗೂ ತೆಗೆದುಕೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಉಲ್ಲೇಖ (2) ರ ಸೂತ್ತೋಲೆಯಲ್ಲಿ ನೀಡಲಾಗಿರುತ್ತದೆ.
2024-25ನೇ ಸಾಲಿನಲ್ಲಿ ನೈಸರ್ಗಿಕ ವಿಕೋಪಗಳಿಂದ ಸ್ಥಳೀಯವಾಗಿ ಉಂಟಾಗುವ ಬೆಳೆ ಹಾನಿಗೆ ಕೇಂದ್ರ ಸರ್ಕಾರದ ಗ್ರಹ ಮಂತ್ರಾಲಯವು ದಿನಾಂಕ: 11.07.2023 ರಂದು ಹೊರಡಿಸಿರುವ Revised Items of Expenditure and Norms of assistance from the State Disaster Response Fund (SDRF) o ಮಾರ್ಗಸೂಚಿಗಳನ್ವಯ ನಿಯಮಾನುಸಾರ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಪಾವತಿಸಬಹುದಾದ ಪರಿಹಾರ ಮೊತ್ತವನ್ನು ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಗಳ ಹಂತದಲ್ಲಿಯೇ ಪರಿಹಾರ ತಂತ್ರಾಂಶದ ಮುಖಾಂತರ ಮಾತ್ರವೇ ನಿಯಮಾನುಸಾರ ಅರ್ಹ ರೈತ ಫಲಾನುಭವಿಗಳಿಗೆ ಅರ್ಹತೆಗನುಗುಣವಾಗಿ ಪಾವತಿಸಲು ತಿರ್ಮಾನಿಸಿ, ಅದರಂತೆ ಸ್ಥಳಿಯವಾಗಿ ಉಂಟಾಗುವ ಬೆಳೆ ಹಾನಿಗಳಿಗೆ ಪರಿಹಾರವನ್ನು ಜಿಲ್ಲಾಧಿಕಾರಿಗಳ ಹಂತದಲ್ಲಿ ನಿಯಮಾನುಸಾರ ಪಾವತಿಸಲು ಕಾರ್ಯವಿಧಾನ ಹಾಗೂ ಷರತ್ತು / ನಿಬಂಧನೆಗಳನ್ನು ನಿಗಧಿ ಪಡಿಸಲು ಸರ್ಕಾರವು ನಿರ್ಧರಿಸಿ, ಈ ಕೆಳಕಂಡಂತೆ ಆದೇಶಿದೆ.
ಸರ್ಕಾರದ ಆದೇಶ ಸಂಖ್ಯೆ: ಕಂಇ 214 ಟಿಎನ್ಆರ್ 2024; ಬೆಂಗಳೂರು, ದಿನಾಂಕ: 16.08.2024.
ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, 2024-25ನೇ ಸಾಲಿನಲ್ಲಿ ನೈಸರ್ಗಿಕ ವಿಕೋಪಗಳಾದ ಅತಿವೃಷ್ಟಿ / ಪುವಾಹ | ಬರ ಪರಿಸ್ಥಿತಿ / ಆಲಿಕಲ್ಲು ಮಳೆಯಿಂದ ಸ್ಥಳೀಯವಾಗಿ ಉಂಟಾಗುವ ಬೆಳೆಹಾನಿ ಪ್ರಕರಣಗಳಲ್ಲಿ, ನಿಯಮಾನುಸಾರ ಅರ್ಹ ರೈತ ಫಲಾನುಭವಿಗಳಿಗೆ ಅರ್ಹತೆಗನುಗುಣವಾಗಿ, ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಹಾನಿಗಳಿಗೆ ಪಾವತಿಸಬಹುದಾದ ಪರಿಹಾರ ಮೊತ್ತದ ಕುರಿತು ಕೇಂದ್ರ ಸರ್ಕಾರದ ಗೃಹ ಮಂತ್ರಾಲಯವು ದಿನಾಂಕ: 11.07.2023 ರಂದು Revised Items of Expenditure and Norms of assistance from the State Disaster Response Fund (SDRE) ರಲ್ಲಿ ನಿಗಧಿಪಡಿಸಿರುವಂತೆ, ಪರಿಹಾರ ಮೊತ್ತವನ್ನು ಜಿಲ್ಲಾಧಿಕಾರಿಗಳ ಹಂತದಲ್ಲಿ ರಾಜ್ಯ ವಿಪತ್ತು ಪರಿಹಾರ ನಿಧಿಯಡಿಯಲ್ಲಿ ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ (ನೈಸರ್ಗಿಕ ವಿಕೋಪ ನಿರ್ವಹಣೆಗಾಗಿ) ಲಭ್ಯವಿರುವ ಅನುದಾನದಿಂದ ಪರಿಹಾರ ತಂತ್ರಾಂಶದ ಮುಖಾಂತರ ಮಾತ್ರ ಈ ಕೆಳಕಂಡ ಷರತ್ತು ಮತ್ತು ನಿಬಂಧನೆಗಳ ಪಾಲನೆಗೊಳಪಟ್ಟು, ಹಾಗೂ ಕಾರ್ಯವಿಧಾನದನ್ವಯ ಪಾವತಿಸಲು ಆದೇಶಿಸಿದ್ದಾರೆ.
BIG NEWS: ಬೆಂಗಳೂರಲ್ಲಿ ‘ಡೆಂಗ್ಯೂ’ ಬಳಿಕ ‘ಝಿಕಾ ವೈರಸ್’ ಆರ್ಭಟ: ಐದು ಪ್ರಕರಣಗಳು ಪತ್ತೆ | Zika Virus
ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ : ಸರ್ಕಾರದಿಂದ ಸಿಗಲಿದೆ ಬಡ್ಡಿ ರಹಿತ 5 ಲಕ್ಷ ರೂ.ವರೆಗೆ ಸಾಲ!