ಕಲಬುರಗಿ: ಸಿದ್ದರಾಮಯ್ಯ ಕಾರು ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂ ಬಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಇದು ಬಿಜೆಪಿ ಪ್ರಾಯೋಜಕತ್ವದದಿಂದ ಆಗಿರೋದು. ಬಿಜೆಪಿಯವರಿಗೆ ನಡುಕ ಹುಟ್ಟಿದೆ ಸಹಿಸಿಕೊಳ್ಳೊಕೆ ಆಗ್ತಿಲ್ಲ. ಅದಕ್ಕೆ ಹೀಗೆಲ್ಲ ಮಾಡುತ್ತಿದ್ದಾರೆ. ಮೊಟ್ಟೆ ಒಗೆಯುವುದು ದೊಡ್ಡ ಕೆಲಸ ಅಲ್ಲ ನಮಗೆ ಮಾಡೋಕೆ ಬರೋದಿಲ್ವಾ , ಆದ್ರೆ ನಾವು ಮಾಡೋದಿಲ್ಲ. ಇದು ಚಿಲ್ಲರೆ ಕೆಲಸ ಯಾರು ಮಾಡೋದಕ್ಕೆ ಹೋಗಬಾರದು ಎಂದು ಹೇಳಿದ್ದಾರೆ.

BIGG BREAKING NEWS: ಹೆಬ್ಬಾಳ ಫ್ಲೈ ಓವರ್ ಬಳಿ ಐಷಾರಾಮಿ ಬೆಂಜ್ ಕಾರು ಅಪಘಾತ; ಚಲಿಸುತ್ತಿದ್ದ ಲಾರಿಗೆ ಡಿಕ್ಕಿಯಾದ ಕಾರು; ಚಾಲಕನಿಗೆ ಗಾಯ

 

ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸ್ವಂತ ಬಲದಿಂದ ಅಧಿಕಾರಕ್ಕೆ ಬರಬೇಕು. ಆ ಮೇಲೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರ ಅಭಿಪ್ರಾಯ ಪಡೆದು ಮುಖ್ಯಮಂತ್ರಿ ಮಾಡ್ತಾರೆ ಎಂದರು.
ಪ್ರತ್ಯೇಕ ಲಿಂಗಾಯಿತ ಧರ್ಮ ನಮ್ಮ ಅಸ್ಮಿತೆ. ಚುನಾವಣೆ ಮುಗಿದ ಮೇಲೆ ಎರಡು ಕಡೆಯ ಸ್ವಾಮೀಜಿಗಳು ಹಿರಿಯರು ಏನ್ ನಿರ್ಧಾರ ತೆಗೆದುಕೊಳ್ಳತ್ತಾರೆ ನೋಡೊಣ. ಚುನಾವಣೆ ಸಂದರ್ಭದಲ್ಲಿ ಅರ್ಥಕ್ಕೆ ಅನರ್ಥ ಸೃಷ್ಟಿಯಾಗುತ್ತೆ. ಪ್ರತ್ಯೇಕ ಲಿಂಗಾಯಿತ ಧರ್ಮಕ್ಕೆ ಅದರದ್ದೆ ಆದ ಟೈಮ್ ಬೇಕಾಗುತ್ತೆ. ಆದರೆ ಅದು
ಒಂದು ವರ್ಷ ಎರಡು ವರ್ಷ ಐದು ವರ್ಷ ಆಗಬಾರದು ಎಂದು ಎಂ.ಬಿ ಪಾಟೀಲ್‌ ಹೇಳಿದ್ದಾರೆ.

Share.
Exit mobile version