ಬೆಂಗಳೂರು: ನಗರದ ಹೆಬ್ಬಾಳ ಫ್ಲೈ ಓವರ್ ಬಳಿ ಐಷಾರಾಮಿ ಬೆಂಜ್ ಕಾರು ಅಪಘಾತ ಸಂಭವಿಸಿದೆ. ಮುಂಜಾನೆ 4.30 ಸುಮಾರಿಗೆ ನಡೆದ ಘಟನೆ ನಡೆದಿದೆ.

BIGG BREAKING NEWS: ದೇಶದಲ್ಲಿ ಮತ್ತೆ ಏರಿಕೆ ಕಂಡ ಕೊರೊನಾ; ಕಳೆದ 24 ಗಂಟೆಗಳಲ್ಲಿ 15,754 ಹೊಸ ಪ್ರಕರಣ ಪತ್ತೆ| COVID CASE

 

ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಬಂದು ಕಾರು ಡಿಕ್ಕಿ ಹೊಡೆದ ಪರಿಣಾಮ ಸಂಪೂರ್ಣ ನಜ್ಜು ಗುಜ್ಜು ಆಗಿದೆ. ಈ ಘಟನೆಯಲ್ಲಿ ಚಾಲಕನಿಗೆ ಸಣ್ಣ-ಪುಟ್ಟ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಗೆಸ್ಟ್ ಅನ್ನು ವಿಮಾನ ನಿಲ್ದಾಣದಿಂದ ಕರೆತರುವಾಗ ಈ ದುರ್ಘಟನೆ ಸಂಭವಿದೆ. ಈ ವೇಳೆ ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಭಾರಿ ಅನಾಹುತ ತಪ್ಪಿದೆ. ಆರ್ ಟಿ ನಗರ ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

Share.
Exit mobile version