ವಿಜಯನಗರ: ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತುಂಗಭದ್ರಾ ಡ್ಯಾಂಗೆ ಭೇಟಿ ನೀಡಿದರು. ಅಲ್ಲದೇ ಕೊಚ್ಚಿ ಹೋಗಿದ್ದಂತ 19ನೇ ಗೇಟ್ ಬಳಿಗೆ ತೆರಳಿ ಪರಿಶೀಲನೆ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಹೊಸಪೇಟೆಯ ತುಂಗಭದ್ರಾ ಅಣೆಕಟ್ಟಿನ ಗೇಟ್ ಮುರಿದಿರುವ ಸ್ಥಳವನ್ನು ಪರಿಶೀಲನೆ ಮಾಡಿ ನಂತರ ಮಾಧ್ಯಮ ದವರೊಂದಿಗೆ ಮಾತನಾಡಿದರು.
ನಾನು ನಿನ್ನೆಯೇ ಬರಬೇಕಾಗಿತ್ತು. ಆದರೇ ಅದು ಸಾಧ್ಯವಾಗಲಿಲ್ಲ. ಆಗಸ್ಟ್.10ನೇ ತಾರೀಕಿನಂದು ಚೈನ್ ಕಟ್ಟ್ ಆಗಿದೆ. ನಾವು ನೀರನ್ನು 10 ಗೇಟ್ ಗಳ ಮೂಲಕ ಬಿಡಲಾಗುತ್ತಿದೆ. 19ನೇ ಗೇಟ್ ಕೂಡ ಅದರಲ್ಲಿ ಸೇರಿದೆ ಎಂದರು.
19ನೇ ಗೇಟ್ ನಲ್ಲಿ ಚೈನ್ ಕಟ್ಟಾಗಿ ಗೇಟ್ ಕೊಚ್ಚಿ ಹೋಗಿದೆ. ಗೇಟ್ ಇರುವುದು ನೀರನ್ನು ಕಂಟ್ರೋಲ್ ಮಾಡುವುದಕ್ಕೆ. ಡ್ಯಾಂ ಸೇಫ್ಟಿ ಎಕ್ಸ್ ಪರ್ಟ್ ಕಮಿಟಿಯನ್ನು ಸಂಪರ್ಕಿಸಿದ್ದೇವೆ. ಅವರ ಸಲಹೆಯ ಮೇರೆಗೆ ತುಂಗಭದ್ರಾ ಡ್ಯಾಂ ಗೇಟ್ ರಿಪೇರಿ ಕಾರ್ಯವನ್ನು ನಡೆಸಲಾಗುತ್ತದೆ ಎಂದರು.
ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶದ ಸದಸ್ಯರು ಈ ಕಮಿಟಿಯಲ್ಲಿ ಇರುತ್ತಾರೆ. 1948ರಲ್ಲಿ ಪ್ರಾರಂಭವಾಗಿ, 53ನೇ ಇಸಲಿಗೆ ತುಂಗಭದ್ರಾ ಡ್ಯಾಂ ಕಟ್ಟುವುದು ಮುಕ್ತಾಯಗೊಂಡಿದೆ. 55ರಿಂದ ನೀರು ಬಿಡುಗಡೆ ಮಾಡುವ ಕೆಲಸ ಆಗುತ್ತಿದೆ. 75 ವರ್ಷ ಈ ಡ್ಯಾಂಗೆ ಆಗಿದೆ. ಅಲ್ಲಿಂದ ಇಲ್ಲಿಯವರೆಗೆ ಚೈನ್ ಕಟ್ ಆಗಿರಲಿಲ್ಲ ಎಂದರು.
115 ಟಿಎಂಸಿ ನೀರು ಡ್ಯಾಂನಲ್ಲಿದೆ. ಇದರಲ್ಲಿ 25 ಟಿಎಂಸಿ ನೀರನ್ನು ರೈತರ ಬೆಳೆಗಳಿಗೆ ಬಿಡುಗಡೆ ಮಾಡಲಾಗಿದೆ. ಈಗ ಡ್ಯಾಂನಲ್ಲಿ 90 ಟಿಎಂಸಿ ನೀರಿದೆ. ಮೊದಲನೇ ಬೆಳೆಗೆ ಏನು ಸಮಸ್ಯೆ ಆಗುವುದಿಲ್ಲ ಎಂದು ತಿಳಿಸಿದರು.
35,000 ಕ್ಯೂಸೆಕ್ಸ್ ನೀರು ಗೇಟ್ ಮೂಲಕ ಬಿಡುಗಡೆ ಮಾಡಲಾಗುತ್ತಿದೆ. ನೀರು ಕಡಿಮೆ ಮಾಡದೇ ಗೇಟ್ ರಿಪೇರಿ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ರಿಪೇರಿ ಕೆಲಸ ಆಗುತ್ತದೆ. ನಾಲ್ಕರಿಂದ ಐದು ದಿನಗಳ ಕಾಲ ಬೇಕಾಗುತ್ತದೆ. ನಾಳೆ ಗೇಟ್ ತಯಾರಾಗುತ್ತದೆ. ನಾರಾಯಣ ಇಂಜನೀಯರಿಂಗ್, ಜಿಂದಾಲ್ ಇಂಜಿನಿಯರಿಂಗ್ ಮೂರು ಕಡೆಯಲ್ಲಿ ಗೇಟ್ ತಯಾರಾಗುತ್ತಿದೆ ಎಂದರು.
BREAKING: ಕರ್ನಾಟಕಕ್ಕೆ ಮತ್ತೆ ರಿಲೀಫ್: ‘ಕಾವೇರಿ ನದಿ’ ನೀರು ಹರಿಸುವ ವಿಚಾರದಲ್ಲಿ ಯಾವುದೇ ಆದೇಶ ಮಾಡದ ‘CWRC’
ಡೋಪಿಂಗ್ ನಿಯಮ ಉಲ್ಲಂಘನೆ: ಪ್ಯಾರಾಲಿಂಪಿಯನ್ ಪ್ರಮೋದ್ ಭಗತ್ ಗೆ 18 ತಿಂಗಳು ನಿಷೇಧ