ಮಂಗಳೂರು: ಇದೇ ನವೆಂಬರ್ ಒಳಗೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ಧರಾಮಯ್ಯ ರಾಜೀನಾಮೆ ನೀಡಲಿದ್ದಾರೆ ಎಂಬುದಾಗಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರು ಸ್ಪೋಟಕ ಭವಿಷ್ಯ ನುಡಿದಿದ್ದಾರೆ.
ಇಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಕುಂಜಾಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ದೇವರಾಜ ಅರಸು ಅವರು ರಾಜ್ಯದಲ್ಲಿ ಅತಿ ಹೆಚ್ಚು ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು. ಇಂತಹ ದೇವರಾಜ ಅರಸು ದಾಖಲೆಯನ್ನು ಮುರಿದು ತಾನು ಕುರ್ಚಿ ಬಿಟ್ಟುಕೊಡುವುದಾಗಿ ಕಾಂಗ್ರೆಸ್ ಹೈಕಮಾಂಡ್ ಮುಂದೆ ಸಿದ್ಧರಾಮಯ್ಯ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬುದಾಗಿ ಸ್ಪೋಟಕ ಹೇಳಿಕೆ ನೀಡಿದರು.
ತಾವು, ಡಿಕೆ ಶಿವಕುಮಾರ್ 50:50ರ ಅನುಪಾತದಂತೆ ಅಧಿಕಾರ ಹಂಚಿಕೆ ಮಾಡಿಕೊಳ್ಳುತ್ತೇವೆ ಎಂದು ಕಾಂಗ್ರೆಸ್ ಹೈಕಮಾಂಡ್ ಮುಂದೆ ಒಪ್ಪಂದ ಮಾಡಿಕೊಂಡಿದ್ದಾರೆ. ಇದೇ ಮಾತನ್ನು ಸಂಡೂರು ಉಪ ಚುನಾವಣೆ ಸಂದರ್ಭದಲ್ಲೂ ಸಿಎಂ ಸಿದ್ಧರಾಮಯ್ಯ ಹೇಳಿದ್ದರು. ಅದರ ಮುಂದಿನ ಭಾಗವಾಗಿ ಡಿ.ಕೆ ಶಿವಕುಮಾರ್ ಈಗಿನಿಂದಲೇ ಬುನಾದಿ ಹಾಕಲು ಆರಂಭಿಸಿದ್ದಾರೆ ಎಂದರು.
ನನಗೆ ಬಂದ ಮಾಹಿತಿ ಪ್ರಕಾರ ದೇವರಾಜ ಅರಸು ಅವರಿಗಿಂತ ಒಂದು ದಿನ ಹೆಚ್ಚು ಕಾಲ ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ ಅಧಿಕಾರ ಮಾಡಲಿದ್ದಾರೆ. ಆ ಬಳಿಕ ತಮ್ಮ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ. ನವೆಂಬರ್ ಒಳಗೆ ಇದು ನಡೆಯಲಿದೆ. ಡಿ.ಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನು ಸಿದ್ಧರಾಮಯ್ಯ ಬಿಟ್ಟುಕೊಡಲಿದ್ದಾರೆ ಎಂದರು.
ಒಂದು ವೇಳೆ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿ ಕುರ್ಚಿ ಬಿಟ್ಟುಕೊಡದೇ ಇದ್ದರೇ ಡಿ.ಕೆ ಶಿವಕುಮಾರ್ ಅವರೇ ಕಸಿದುಕೊಳ್ಳತ್ತಾರೆ. ಸಿಎಂ ಕುರ್ಚಿಯಲ್ಲಿ ಬಲವಂತವಾಗಿಯೇ ಡಿ.ಕೆ ಶಿವಕುಮಾರ್ ಕುಳಿತುಕೊಳ್ಳುತ್ತಾರೆ. ಆ ವಿಚಾರದಲ್ಲಿ ನಿಮಗೆ ಯಾವುದೇ ಅನುಮಾನವೂ ಬೇಡ. ಇದೀಗ ಅಧಿಕಾರ ಪಡೆಯಲೇ ಬೇಕು ಎನ್ನುವಂತ ಆತುರದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಇದ್ದಾರೆ ಎಂಬುದಾಗಿ ತಿಳಿಸಿದರು.
ತಮ್ಮ ವಿರುದ್ಧದ ಆರೋಪಗಳಿಗೆ ಸಾಗರದ ‘ಉಳ್ಳೂರು ಪಿಡಿಒ ಹರ್ಷವರ್ಧನ್’ ಹೇಳಿದ್ದೇನು ಗೊತ್ತಾ?
BREAKING: ಕೃಷ್ಣಾ ನದಿ ನ್ಯಾಯಮಂಡಳಿಯ ಅವಧಿ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ