ದಾವಣಗೆರೆ: ಮುಸ್ಲೀಂ ಸಮುದಾಯದ ಅಭಿವೃದ್ಧಿಗೆ, ಸಮುದಾಯದ ಏಳಿಗೆಗೆ ಶ್ರಮಿಸಿದಂತ ನಾಯಕರಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಹೊರತು ಬೇರೆ ಯಾರೂ ಇಲ್ಲ. ಸಿದ್ಧರಾಮಯ್ಯ ಬರ್ತಡೇ ಅಲ್ವೇ ಅಲ್ಲ, ಇದು ನಮ್ಮಗಳ ಬರ್ತಡೆ. ಮತ್ತೊಮ್ಮ ಸಿದ್ಧರಾಮಯ್ಯ ಸಿಎಂ ಆಗಲೇ ಬೇಕು. ಮುಸ್ಲೀಂ ಸಮುದಾಯದವರು ಕಾಂಗ್ರೆಸ್ ಪಕ್ಷಕ್ಕೆ ಮತಹಾಕುವಂತೆ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಕರೆ ನೀಡಿದ್ದಾರೆ.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸಿದ್ಧರಾಮಯ್ಯ ಮುಸ್ಲೀಂ ಸಮುದಾಯದವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಹೀಗೆ ಕಾಳಜಿ ಹೊಂದಿರುವಂತ ಏಕೈಕ ನಾಯಕರಾಗಿದ್ದಾರೆ ಎಂದರು.

BREAKING NEWS: ಸಭಾಪತಿ ಪೀಠದ ಎದುರು ನಾಮಫಲಕ ಪ್ರದರ್ಶನ ಹಿನ್ನಲೆ: ರಾಜ್ಯಸಭೆಯ 11 ಸದಸ್ಯರು 1 ವಾರ ಕಲಾಪದಿಂದ ಅಮಾನತು

ರಾಜ್ಯದಲ್ಲಿ ಅಲಾಲ್ ಕಟ್ ನಿಷೇಧ, ಜಟ್ಕಾ ಕಟ್ ನಂತಹ ಆಹಾರ ಪದ್ಧತಿ ವಿಚಾರ ತಾರಕಕ್ಕೆ ಎದ್ದಾಗ, ಮುಸ್ಲೀಂ ಸಮುದಾಯದವರ ಪರ ನಿಂತಿದ್ದು ಸಿದ್ಧರಾಮಯ್ಯ ಆಗಿದ್ದಾರೆ. ಅವರು ವಕ್ಫ್ ಗೆ ಕೊಟ್ಟ ಕೊಡುಗೆ ಬಹಳ ದೊಡ್ಡದು ಎಂದು ಹಾಡಿ ಹೊಗಳಿದರು.

ಶಾದಿ ಭಾಗ್ಯ, ಅನ್ನ ಭಾಗ್ಯ ಯೋಜನೆ ಜಾರಿ ಮಾಡಿದ್ದಾರೆ. 200 ಕೋಟಿ ಅನುದಾನವನ್ನು 3200 ಕೋಟಿಗೆ ಹೆಚ್ಚಳ ಮಾಡಿದ್ದಾರೆ. ವಕ್ಫ್ ಬೋರ್ಡ್ ಜಾಗದಲ್ಲೇ ಮನೆ ನಿರ್ಮಿಸಿಕೊಡೋದಾಗಿ ಹೇಳಿದ್ದಾರೆ ಎಂದರು.

ಜು.28ರಿಂದ ರಾಜ್ಯಾಧ್ಯಂತ ಜನೋತ್ಸವ ಆಚರಣೆ – ಸಚಿವ ವಿ.ಸುನೀಲ್ ಕುಮಾರ್

ಅಲ್ಪಸಂಖ್ಯಾತರಿಗೆ ಸಿದ್ಧರಾಮಯ್ಯ 5 ಸಾವಿರ ಕೋಟಿ ಅನುದಾವನ್ನು ಮೀಸಲಿಟ್ಟಿದ್ದರು. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅನುದಾನ ಕೇಳಿದ್ರೇ ಕೊಡೋದಕ್ಕೆ ನಿರಾಕರಿಸಿದರು. ರೈತರ ಸಾಲಾ ಮನ್ನಾ ಮಾಡಬೇಕು. ಮುಂದಿನ ವರ್ಷ ನೋಡೋಣ ಅಂದ್ರು. ನಾನು ಅಧಿಕಾರದಲ್ಲಿದ್ದಾಗ ಬಂದಿದ್ದರೇ 5 ಸಾವಿರ ಕೋಟಿ ನೀಡುತ್ತಿದ್ದೆ ಎಂದಿದ್ದರು. ಅದೇ ವೇಳೆ ಸಿದ್ಧರಾಮಯ್ಯ ನನ್ನ ಕರೆದು, ಇಂತಹ ಮನುಷ್ಯನನ್ನು ನಾನು ಕೇಳಬೇಕಾ.? ಎಂದು ಹೇಳಿದ್ದರು ಎಂದರು.

ಸಿದ್ಧರಾಮಯ್ಯ ಮುಂದಿನ ಸಿಎಂ ಆಗುವುದರ ಹೊರತು ಬೇರಾರು ಇಲ್ಲ. ರಾಜ್ಯದಲ್ಲಿ ಬೇರೆ ಯಾರೇ ಸಿಎಂ ಆದ್ರೇ ಮುಸ್ಲೀಂ ಸಮುದಾಯ ಬೆಳವಣಿಗೆ ಆಗೋದಿಲ್ಲ. ಸಿದ್ಧರಾಮಯ್ಯ ಬರ್ತಡೆ ಅಲ್ವೇ ಅಲ್ಲ. ಇದು ನಮ್ಮ ಬರ್ತಡೆ. ಸಿದ್ಧರಾಮಯ್ಯ ಶೇರ್ ಇದ್ದಂತೆ, ಟಿಪ್ಪು ಸುಲ್ತಾನ್ ಜಯಂತಿ ಮಾಡಿದ್ರು. ಈಗ ಅವರ ಪರ ನಿಲ್ಲೋದಕ್ಕೆ ಕಾಲ ಬಂದಿದೆ. ಮುಸ್ಲೀಮರು ಸಾಮೂಹಿಕವಾಗಿ ಮತ ಹಾಕಿ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು. ಸಿದ್ದರಾಮಯ್ಯ ಮತ್ತೊಂದು ಅವಧಿಗೆ ಸಿಎಂ ಮಾಡಲೇ ಬೇಕು ಎಂದು ಹೇಳಿದರು.

ಯಾರು ಬೇಕಾದರೂ ‘ಶ್ರೀಮಂತ’ರಾಗಬಹುದು: ಅದೇಗೆ ಎನ್ನುವ ‘ಸಿಂಪಲ್ ಮಾಹಿತಿ’ ಇಲ್ಲಿದೆ.!

Share.
Exit mobile version