ನವದೆಹಲಿ: ಸಂಸತ್ ಕಲಾಪದಲ್ಲಿ ಭಿತ್ತಿ ಪ್ರತ್ರಗಳು ಸೇರಿದಂತೆ ವಿವಿಧ ತರದ ಪ್ರದರ್ಶನ ಫಲಕಗಳನ್ನು ನಿಷೇಧಿಸಲಾಗಿತ್ತು. ಈ ನಡುವೆಯು ಇಂದು ರಾಜ್ಯಸಭೆಯಲ್ಲಿ ಸಭಾಪತಿ ಪೀಠದ ಮುಂದೆ ನಾಮಫಲಕ ಹಿಡಿದು ಪ್ರತಿಭಟನೆ ನಡೆಸಿದಂತ 11 ಸದಸ್ಯರನ್ನು 1 ವಾರಗಳ ಕಾಲ ಕಲಾಪದಿಂದ ಅಮಾನತುಗೊಳಿಸಲಾಗಿದೆ.

ಇಂದು ರಾಜ್ಯಸಭೆಯ ಕಲಾಪ ಆರಂಭಗೊಳ್ಳುತ್ತಿದ್ದಂತೆ ಕೇಂದ್ರ ಸರ್ಕಾರದ ವಿರುದ್ಧ ವಿವಿಧ ವಿಷಯಗೊಂದಿಗೆ ಸದಸ್ಯರು ಪ್ರತಿಭಟನೆಗೆ ಇಳಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸ್ಪೀಕರ್ ತಮ್ಮ ಸ್ಥಾನಕ್ಕೆ ತೆರಳುವಂತೆ ಸೂಚಿಸಿದರೂ ಕೇಳಲಿಲ್ಲ.

BIGG NEWS : ತಮಿಳುನಾಡಿನ ಮದುರೈ ದೇವಾಲಯದಲ್ಲಿ ʻ ಹಿಂಸಾತ್ಮಕ ಘರ್ಷಣೆ ʼ : 10 ಮಂದಿಗೆ ʻ ಗಂಭೀರ ಗಾಯ ʼ | Tamil Nadu

ಇದಲ್ಲದೇ ಸಭಾಪತಿ ಪೀಠದ ಮುಂದೆಯೇ ನಾಮಫಲಕ ಹಿಡಿದು ಪ್ರತಿಭಟನೆಯನ್ನು ತೃಣಮೂಲ ಕಾಂಗ್ರೆಸ್ ಪಕ್ಷದ ಸದಸ್ಯೆ ಸುಶ್ಮಿತಾ ದೇವ್, ಡಿಎಂಕೆ ಸದಸ್ಯೆ ಕನಿಮೋಳಿ ಸೇರಿದಂತೆ ಹಲವರು ಪ್ರತಿಭಟನೆ ನಡೆಸಿದರು. ಈ ಹಿನ್ನಲೆಯಲ್ಲಿ 11 ಮಂದಿ ರಾಜ್ಯಸಭಾ ಸದಸ್ಯರನ್ನು ಸಭಾಪತಿಗಳು 1 ವಾರದಿಂದ ಕಲಾಪದಿಂದ ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಅಂದಾಹೇ ನಿನ್ನೆಯಷ್ಟೇ ಸ್ಪೀಕರ್ ಲೋಕಸಭೆಯಲ್ಲಿ ಕಲಾಪದ ವೇಳೆಯಲ್ಲಿ ಪ್ರತಿಭಟನೆ ನಡೆಸಿದ್ದಂತ ನಾಲ್ವರು ಸದಸ್ಯರನ್ನು ಅಮಾನತುಗೊಳಿಸಿದ್ದರು. ಈ ಬೆನ್ನಲ್ಲೇ ಇಂದು ರಾಜ್ಯಸಭೆಯ 11 ಸದಸ್ಯರನ್ನು ಒಂದು ವಾರ ಕಲಾಪದಿಂದ ಅಮಾನತುಗೊಳಿಸಲಾಗಿದೆ.

ಯಾರು ಬೇಕಾದರೂ ‘ಶ್ರೀಮಂತ’ರಾಗಬಹುದು: ಅದೇಗೆ ಎನ್ನುವ ‘ಸಿಂಪಲ್ ಮಾಹಿತಿ’ ಇಲ್ಲಿದೆ.!

Share.
Exit mobile version