ಬೆಂಗಳೂರು: ನಗರದಲ್ಲಿ ಮತ್ತೆ ಮಳೆ ಆರ್ಭಡಿಸಿದೆ. ಬೆಂಗಳೂರಲ್ಲಿ ವರುಣ ಆರ್ಭಟಿಸುತ್ತಿದ್ದು, ನಗರದ ಹಲವಡೆ ಭಾರೀ ಮಳೆಯಿಂದಾಗಿ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿದೆ. ಅಲ್ಲದೇ ಟ್ರಾಫಿಕ್ ಜಾಮ್ ಕೂಡ ಉಂಟಾಗಿ, ವಾಹನ ಸವಾರರು ಪರದಾಡುವಂತೆ ಆಗಿದೆ.

ಬೆಂಗಳೂರಿನ ಹಲವೆಡೆ ಮತ್ತೆ ಮಳೆ ಆರಂಭಗೊಂಡಿದೆ. ನಿನ್ನೆ ಸೇರಿದಂತೆ ಕೆಲ ದಿನಗಳ ಹಿಂದಿನಿಂದ ಸುರಿಯುತ್ತಿರುವಂತ ಮಳೆಯಿಂದಾಗಿ ಅವಾಂತರವೇ ಉಂಟಾಗಿತ್ತು. ಮುಂದೆ ಹೀಗೆ ಅವಾಂತರವಾದಾಗ ಸೂಕ್ತ ರೀತಿಯಲ್ಲಿ ಕಾರ್ಯಪ್ರವೃತ್ತಿಯಾಗಲು ವಲಯವಾರು ಕಂಟ್ರೋಲ್ ರೂಮನ್ನೂ ಬಿಬಿಎಂಪಿಯಿಂದ ತೆರೆಯಲಾಗಿದೆ.

ಇದರ ನಡುವೆ ಇಂದು ಕೂಡ ಮಳೆ ಮುಂದುವರೆದಿದೆ. ಚಿಕ್ಕಬಿದರಕಲ್ಲು ಸೇರಿದಂತೆ ವಿವಿಧೆಡೆ ಮಳೆಯಾಗುತ್ತಿದೆ. ಮಳೆಯ ಆರ್ಭಟದಿಂದಾಗಿ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ವಾಹನಗಳ ಸಂಚಾರ ಮಂದಗತಿಯಲ್ಲಿ ಸಾಗುವಂತೆ ಆಗಿದೆ. 8ನೇ ಮೈಲಿಯ ನವಯುಗ ಟೋಲ್ ನಿಂದ ಮಾದಾವರದವರೆಗೆ ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲೂ ಭಾರೀ ಮಳೆಯಾಗುತ್ತಿದ್ದು, ಜನರು ವರುಣನ ಆರ್ಭಟದಿಂದ ತತ್ತರಿಸಿ ಹೋಗುವಂತೆ ಆಗಿದೆ.

ಮುಸ್ಲಿಮರಿಗೆ ಉದ್ಯೋಗ ಮೀಸಲಾತಿ ನೀಡಲು ಕಾಂಗ್ರೆಸ್ ಪಿತೂರಿ: ಮೋದಿ

ಕಲಬುರ್ಗಿಯಲ್ಲಿ ರಾಜಕೀಯ ವೈಷಮ್ಯಕ್ಕೆ ವ್ಯಕ್ತಿಯ ಹತ್ಯೆ : ಕಾಂಗ್ರೆಸ್ ಪರ ಪ್ರಚಾರ ಮಾಡಿದಕ್ಕೆ ಕೊಲೆ

Share.
Exit mobile version