ಮೂರು ದಶಕಗಳಷ್ಟು ಹಳೆಯದಾದ ರಾಮ ಮಂದಿರ ಪ್ರಕರಣಕ್ಕೆ ಸಂಬಂಧಿಸಿದ ಹಿಂದೂ ಕಾರ್ಯಕರ್ತನ ಬಂಧನದ ವಿರುದ್ಧ ಕರ್ನಾಟಕದ ತೀವ್ರ ಪ್ರತಿಭಟನೆಯ ಮಧ್ಯೆ, ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು “ಹಿಂದೂ ವಿರೋಧಿ” ಎಂದು ಟೀಕಿಸಿದೆ.
ಈ ನಡುವೆ ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ನೀಡಿ, ರಾಮಮಂದಿರಕ್ಕೆ ಒಂದು ರೂ. ಸಹ ದೇಣಿಗೆ ನೀಡದ ಚುನಾವಣಾ ಹಿಂದೂ ಸಿಎಂ ಸಿದ್ದರಾಮಯ್ಯರವರ ಅಸಲಿ ಮುಖ ಇದು. ವಿಜಯಪುರದ ದ್ಯಾಬೇರಿ ಗ್ರಾಮದ ವಾಗ್ದೇವಿ ದೇವಿಯ ದರ್ಶನವನ್ನು ಕಾಟಾಚಾರಕ್ಕೆ ಮಾಡಿದ ಹಿಂದೂ ವಿರೋಧಿ ಸಿದ್ದರಾಮಯ್ಯರವರು ಪ್ರಭು ಶ್ರೀರಾಮರ ಅಪರಾವತಾರವಂತೆ. ಸಿಎಂ ಸಿದ್ದರಾಮಯ್ಯ ಅವರೇ ಮಸೀದಿ, ದರ್ಗಾಗಳಿಗೆ ಹೋಗಿ ಅವರು ನೀಡಿದ್ದೆಲ್ಲವನ್ನೂ ಮೈ ಮೇಲೆ ಹಾಕಿಕೊಂಡು ಫೋಸು ಕೊಡುವ ನಿಮಗೆ, ದೇವಿಯ ಬಳಿ ನಾಡಿನ ಒಳಿತಿಗಾಗಿ ಭಕ್ತಿಯಿಂದ ಕೈ ಮುಗಿಯುವಷ್ಟು ಸಮಯವಿಲ್ಲ. ಹಿಂದೂ ಧರ್ಮ, ಹಿಂದೂ ದೈವ ಹಾಗೂ ಹಿಂದೂಗಳನ್ನು ಕಂಡರೆ ಈ ಪರಿ ಅಸಡ್ಡೆ ಏಕೆ..? ಅಂತ ಪ್ರಶ್ನೆ ಮಾಡಿದೆ.
ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ನೀಡಿ, ರಾಮಮಂದಿರಕ್ಕೆ ಒಂದು ರೂ. ಸಹ ದೇಣಿಗೆ ನೀಡದ ಚುನಾವಣಾ ಹಿಂದೂ ಸಿಎಂ ಸಿದ್ದರಾಮಯ್ಯರವರ ಅಸಲಿ ಮುಖ ಇದು.
ವಿಜಯಪುರದ ದ್ಯಾಬೇರಿ ಗ್ರಾಮದ ವಾಗ್ದೇವಿ ದೇವಿಯ ದರ್ಶನವನ್ನು ಕಾಟಾಚಾರಕ್ಕೆ ಮಾಡಿದ ಹಿಂದೂ ವಿರೋಧಿ ಸಿದ್ದರಾಮಯ್ಯರವರು ಪ್ರಭು ಶ್ರೀರಾಮರ ಅಪರಾವತಾರವಂತೆ.
ಸಿಎಂ @siddaramaiah ಅವರೇ,… pic.twitter.com/wd8LRjBGb4
— BJP Karnataka (@BJP4Karnataka) January 3, 2024