ಹಾವೇರಿ: ರಾಜ್ಯದಲ್ಲಿ ಉಪ ಮುಖ್ಯಮಂತ್ರಿ ಮಾಡಿ ರಾಜಕೀಯವಾಗಿ ಬೆಳೆಸಿದ ದೇವೇಗೌಡರಿಗೆ ಕೈಕೊಟ್ಟು ನಿರಂತರ ವಿರೋಧಿಸಿರುವ ಕಾಂಗ್ರೆಸ್ ಜೋಡಿ ಕೈ ಜೋಡಿಸಿರುವ. ಸಿಎಂ ಸಿದ್ದರಾಮಯ್ಯ ನಿಜವಾದ ಶಕುನಿ ಎಂದು ರಾಜ್ಯದ ಜನತೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ಪ್ರಚಾರದಲ್ಲಿ ತಮ್ಮ ವಿರುದ್ದ ಮಾಡಿರುವ ಆರೋಪಕ್ಕೆ ಟ್ವಿಟ್ ಮೂಲಕ ತಿರುಗೇಟು ನೀಡಿರುವ ಅವರು, ಜೆಡಿಎಸ್ ನಿಂದ ಹೊರ ಬಂದಾಗ ಪ್ರಗತಿಪರ ಜನತಾದಳ ಪಕ್ಷದ ಅಡಿಯಲ್ಲಿ ತಾಲೂಕು, ಜಿಲ್ಲಾ ಪಂಚಾಯತಿ ಚುನಾವಣೆ ಮಾಡಿ ಅವರ ಅಸ್ತಿತ್ವ ಉಳಿಸಿದ್ದು ಇದೆ ಬಸವರಾಜ ಬೊಮ್ಮಾಯಿ ಎನ್ನುವುದನ್ನು ಮರೆತಿದ್ದಾರೆ.
ಸಿದ್ದರಾಮಯ್ಯ ಅವರು ಅಹಿಂದ ಮಾಡಿದಾಗ ಅವರ ಜೊತೆಗೆ ಬಹಿರಂಗವಾಗಿ ಗಟ್ಟಿಯಾಗಿ ನಿಂತ ವೀರಶೈವ ಸಮುದಾಯದ ನಾಯಕ ನಾನೊಬ್ಬನೇ. ಅವರು 2006 ರಲ್ಲಿ ಜೆಡಿಎಸ್ ಗೆ ರಾಜಿನಾಮೆ ಕೊಟ್ಟು ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ನಾನು ಯಾವ ರೀತಿ ಸಹಾಯ ಮಾಡಿದ್ದೇನೆ ಎಂದು ನೆನಪಿಸಿಕೊಳ್ಳಲಿ ಎಂದು ಹೇಳಿದ್ದಾರೆ.
ದಾವಣಗೆರೆ: ನಾಳೆ ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut