ಬೆಂಗಳೂರು: ಕನ್ನಡದ ಬಿಗ್ ಬಾಸ್ ಸೀಸನ್-10ರಲ್ಲಿ ಭಾಗಿಯಾಗಿ, ಹವಾ ಕ್ರಿಯೇಟ್ ಮಾಡಿದ್ದಂತ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ವರ್ತೂರು ಠಾಣೆಯ ಎಸ್ಐ ತಿಮ್ಮರಾಯಪ್ಪ ಸನ್ಮಾನಿಸಿದ್ದರು. ಅವರನ್ನು ಇಂದು ಸರ್ಕಾರ ವರ್ಗಾವಣೆ ಮಾಡಿ ಆದೇಶಿಸಿದೆ.
ವರ್ತೂರು ಸಂತೋಷ್ ಅವರು ಬಿಗ್ ಬಾಸ್ ಸ್ಪರ್ಧಿಯಾಗಿ, ಬಿಗ್ ಬಾಸ್ ಮನೆಯಲ್ಲಿ ಹವಾ ಕ್ರಿಯೇಟ್ ಮಾಡಿದ್ದರು. ಹುಲಿಯುಗುರು ಪ್ರಕರಣದಲ್ಲೂ ಆರೋಪಿಯಾಗಿ, ಜಾಮೀನು ಪಡೆದು ಹೊರ ಬಂದಿದ್ದರು. ಇಂತಹ ಅವರನ್ನು ವರ್ತೂರು ಠಾಣೆಯ ಎಸ್ಐ ತಿಮ್ಮರಾಯಪ್ಪ ಅವರು ಸಮವಸ್ತ್ರದಲ್ಲೇ ಸನ್ಮಾನಿಸಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು.
ಠಾಣೆಯ ಎಸ್ಐ ಅಲ್ಲದೇ ಅವರೊಂದಿಗೆ ಸಿಬ್ಬಂದಿಗಳು ಕೂಡ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈ ಬೆನ್ನಲ್ಲೇ ವರ್ತೂರು ಠಾಣೆಯ ಎಸ್ಐ ತಿಮ್ಮರಾಯಪ್ಪ ಅವರನ್ನು ಆಡುಗೋಡಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿ, ಆದೇಶಿಸಿಲಾಗಿದೆ.
BREAKING: 17ನೇ ಲೋಕಸಭೆಗೆ ಅಧಿಕೃತವಾಗಿ ತೆರೆ: ಅನಿರ್ಧಿಷ್ಟಾವಧಿಗೆ ಮುಂದೂಡಿಕೆ | Lok Sabha adjourned
‘ನಮೋ ಹ್ಯಾಟ್ರಿಕ್’: ಸಂಸತ್ತಿಗೆ ‘ಕೇಸರಿ ಟೀ ಶರ್ಟ್’ ಧರಿಸಿ ಬಂದ ಸಚಿವ ಅನುರಾಗ್ ಠಾಕೂರ್