ಶಿವಮೊಗ್ಗ: ಮಹಿಳೆಯರ ಸಬಲೀಕರಣಕ್ಕಾಗಿ ರಚನೆಯಾದಂತ ಸಾಗರ ತಾಲ್ಲೂಕು ಮಟ್ಟದ ಒಕ್ಕೂಟದ ಅಧ್ಯಕ್ಷರಾಗಿ ಶ್ಯಾಮಲಾ ದೇವರಾಜ್, ಉಪಾಧ್ಯಕ್ಷರಾಗಿ ಲತಾ ಆಯ್ಕೆಯಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಮಟ್ಟದ ಒಕ್ಕೂಟಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಎನ್ ಆರ್ ಎಲ್ ಎಂ ಸಂಜೀವಿನಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಸಾಗರ ತಾಲ್ಲೂಕಿನಾಧ್ಯಂತ ಗ್ರಾಮ ಪಂಚಾಯ್ತಿಗೊಂದು ಒಕ್ಕೂಟ ರಚನೆಯಾಗಿದೆ.
ಸಾಗರ ತಾಲ್ಲೂಕಿನಲ್ಲಿ 35 ಒಕ್ಕೂಟದ ಸದಸ್ಯರಿದ್ದು, ಪ್ರತಿ ಎರಡು ವರ್ಷಗಳಿಗೊಮ್ಮೆ ಸಾಗರ ತಾಲ್ಲೂಕು ಮಟ್ಟದ ಒಕ್ಕೂಟಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಇಂದು ಸಾಗರ ತಾಲ್ಲೂಕು ಮಟ್ಟದ ಒಕ್ಕೂಟದ ಅಧ್ಯಕ್ಷರಾಗಿ ಶ್ಯಾಮಲಾ ದೇವರಾಜ್, ಉಪಾಧ್ಯಕ್ಷರಾಗಿ ಲತಾ, ಕಾರ್ಯದರ್ಶಿಯಾಗಿ ಮಮತಾ, ಸಹ ಕಾರ್ಯದರ್ಶಿಯಾಗಿ ಶಾಂತಾ ಬಿ.ಸಿ ಹಾಗೂ ಖಜಾಂಚಿಯಾಗಿ ವನಿತಾ ಆಯ್ಕೆಯಾಗಿದ್ದಾರೆ.
ಏನಿದು ತಾಲ್ಲೂಕು ಮಟ್ಟದ ಒಕ್ಕೂಟ? ಏನಿದರ ಕಾರ್ಯ ನಿರ್ವಹಣೆ?
ಎನ್ ಆರ್ ಎಲ್ ಎಂ ಸಂಜೀವಿನಿ ಯೋಜನೆಯಡಿ ಸರ್ಕಾರದಿಂದ ವಿವಿಧ ಸೌಲಭ್ಯಗಳನ್ನು ಮಹಿಳಾ ಸ್ವಸಹಾಯ ಸಂಘಗಳಿಗೆ ತಲುಪಿಸುವಂತ ಕೆಲಸವನ್ನು ಮಾಡುವುದಕ್ಕೆ ರಚನೆಯಾದಂತ ಒಕ್ಕೂಟ ಇದಾಗಿದೆ.
ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿರುವಂತ ಸ್ವಸಹಾಯ ಸಂಘಗಳಿಗೆ ಗ್ರಾಮ ಮಟ್ಟದ ಒಕ್ಕೂಟವನ್ನು ಒರ್ವ ಮಹಿಳಾ ಒಕ್ಕೂಟದ ಸದಸ್ಯರಿರುತ್ತಾರೆ. ಅವರು ತಾಲ್ಲೂಕು ಮಟ್ಟದ ಒಕ್ಕೂಟದ ಜೊತೆಗೂಡಿ ಸ್ವಸಹಾಯ ಸಂಘಗಳಿಗೆ ಸಾಲಸೌಲಭ್ಯಕ್ಕೆ ಮೇಲ್ವಿಚಾರಣೆ ಮಾಡಲಿದ್ದಾರೆ.
ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಸ್ವಸಹಾಯ ಸಂಘದ ಮಹಿಳಾ ಸದಸ್ಯರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಸದೃಢಗೊಳಿಸುವುದಕ್ಕಿ ಈ ಒಕ್ಕೂಟ ಸಹಕಾರಿಯಾಗಲಿದೆ. ಈ ಒಕ್ಕೂಟದ ಮೂಲಕ ಸ್ವಸಹಾಯ ಸಂಘಗಳಿಗೆ ವಿವಿಧ ಸಾಲಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡಲಿದೆ. ಆ ಮೂಲಕ ಮಹಿಳೆಯರು ಸ್ವ-ಉದ್ಯೋಗ, ಗುಂಪು ಚಟುವಟಿಕೆಯಂತ ಕಾರ್ಯಗಳಲ್ಲಿ ತೊಡಗಿಸಿ, ಆರ್ಥಿಕ, ಸಾಮಾಜಿಕವಾಗಿ ಸಬಲರಾಗಲು ನೆರವಾಗುತ್ತದೆ.
ನೂತನ ಸಾಗರ ತಾಲ್ಲೂಕು ಮಟ್ಟದ ಒಕ್ಕೂಟದ ಪದಾಧಿಕಾರಿಗಳ ಆಯ್ಕೆಯ ವೇಳೆಯಲ್ಲಿ ಸಾಗರ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಶಿವಕುಮಾರ್, ತಾಲ್ಲೂಕು ಯೋಜನಾಧಿಕಾರಿ ದಿವ್ಯಾ ಹಾಗೂ ಎನ್ ಆರ್ ಎಲ್ ಎಂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ…, ಸಂಪಾದಕರು
ರಾಜ್ಯದಲ್ಲಿ ಜಾತಿಗಣತಿ ಸಮೀಕ್ಷೆಗೆ ಹಾಜರಾಗದ ಶಿಕ್ಷಕರಿಗೆ ಶಾಕಿಂಗ್ ನ್ಯೂಸ್: ಹೊಸನಗರದಲ್ಲಿ ‘BRC ಸಸ್ಪೆಂಡ್’
ನಾಳೆ ಶಿವಮೊಗ್ಗ ನಗರ, ಕುಂಸಿ, ಆಯನೂರಿನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
ಆರೋಗ್ಯ ಸಂಜೀವಿನಿ ಜಾರಿ: ಸಿಎಂ, ಡಿಸಿಎಂಗೆ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಧನ್ಯವಾದ