ಕೆಎನ್ಎನ್ ಸಿನಿಮಾ ಡೆಸ್ಕ್: ‘ಪಡ್ಡೆಹುಲಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಟನಾಗಿ ಗುರುತಿಸಿಕೊಂಡಿರುವ ಶ್ರೇಯಸ್ ಮಂಜು ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದಂದು ಅವರು ನಟಿಸಿರುವ ಬಹುನಿರೀಕ್ಷಿತ ‘ದಿಲ್‌ದಾರ್’ ಚಿತ್ರತಂಡವು ವಿಶೇಷ ‘ಬರ್ತ್‌ಡೇ ಟೀಸರ್’ ಬಿಡುಗಡೆ ಮಾಡುವ ಮೂಲಕ ನಟನಿಗೆ ಶುಭಾಶಯ ಕೋರಿದೆ.
ಖಡಕ್ ಲುಕ್‌ನಲ್ಲಿ ಶ್ರೇಯಸ್ ಮಿಂಚಿಂಗ್:
ಈಗಾಗಲೇ ಆಕ್ಷನ್ ಹೀರೋ ಆಗಿ ಸೈ ಎನಿಸಿಕೊಂಡಿರುವ ಶ್ರೇಯಸ್, ‘ದಿಲ್‌ದಾರ್’ ಟೀಸರ್‌ನಲ್ಲಿ ಮತ್ತೊಂದು ಹಂತದ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್‌ನಲ್ಲಿನ ಶ್ರೇಯಸ್ ಅವರ ಆಕ್ಷನ್ ಅವತಾರ ಮತ್ತು ಖಡಕ್ ಮ್ಯಾನರಿಸಂಗೆ ಸಾಮಾಜಿಕ ಜಾಲತಾಣಗಳಲ್ಲಿ ಫ್ಯಾನ್ಸ್ ಫಿದಾ ಆಗಿದ್ದು, ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಹೊಸ ತಲೆಮಾರಿನ ವಿಶಿಷ್ಟ ಕಥೆ:
ಯುವ ನಿರ್ದೇಶಕ ಮಧು ಗೌಡ ಗಂಗೂರ್ ಸಾರಥ್ಯದಲ್ಲಿ ಈ ಸಿನಿಮಾ ಮೂಡಿಬಂದಿದೆ. “ಇಂದಿನ ಕಾಲಘಟ್ಟದ ಯುವಜನತೆಗೆ ನೇರವಾಗಿ ಕನೆಕ್ಟ್ ಆಗುವಂತಹ ವಿಶಿಷ್ಟ ಮತ್ತು ನವೀನ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ” ಎಂದು ನಿರ್ದೇಶಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಟೀಸರ್ ಮೂಲಕ ಚಿತ್ರದ ಭವ್ಯತೆ ಮತ್ತು ಮೇಕಿಂಗ್ ಗುಣಮಟ್ಟದ ಝಲಕ್ ಪ್ರೇಕ್ಷಕರಿಗೆ ಸಿಕ್ಕಿದೆ.
ಚಿತ್ರದ ವಿಶೇಷತೆಗಳು:
-
ಪಾದಾರ್ಪಣೆ: ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನ ಖ್ಯಾತ ನಟ ಶರಣ್ ಅವರ ತಂಗಿಯ ಮಗಳು ಕೀರ್ತಿ ಕೃಷ್ಣ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
-
ತಾರಾಗಣ: ಸಾಧು ಕೋಕಿಲಾ, ಚಂದ್ರಪ್ರಭ, ಕಾರ್ತಿಕ್, ಚಿಲ್ಲರ್ ಮಂಜು ಸೇರಿದಂತೆ ದೊಡ್ಡ ಹಾಸ್ಯ ಕಲಾವಿದರ ದಂಡೇ ಚಿತ್ರದಲ್ಲಿದೆ.
-
ಖಳನಟರು: ಕೆಜಿಎಫ್ ಖ್ಯಾತಿಯ ಆಂಡ್ರೋ ಅವಿನಾಶ್, ಭಜರಂಗಿ ಲೋಕಿ ಮತ್ತು ಅರ್ಪಿತ್ ಪ್ರಬಲ ವಿಲನ್ ಪಾತ್ರಗಳಲ್ಲಿ ಅಬ್ಬರಿಸಿದ್ದಾರೆ.
-
ನಿರ್ಮಾಣ: ಏನ್ಸಿಯೆಂಟ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಡಾ. ಆರ್. ಸಂತೋಷ್ ಕುಮಾರ್ (ಎಸ್‌ವಿಟಿ) ಅವರು ಅತ್ಯಂತ ಅದ್ದೂರಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಪ್ರಸ್ತುತ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಬಿಡುಗಡೆಯ ಹಂತಕ್ಕೆ ಸಿನಿಮಾ ಬಂದು ನಿಂತಿದೆ. ಚಿತ್ರತಂಡ ಶೀಘ್ರದಲ್ಲೇ ಸಿನಿಮಾದ ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಲಿದೆ.
ತಡಿಯಾಂಡಮೋಳ್ ಬೆಟ್ಟದಲ್ಲಿ ಯುವತಿ ಕಣ್ಮರೆ: 40 ಸಿಬ್ಬಂದಿಯ ಹೆಚ್ಚುವರಿ ತಂಡ, ಡ್ರೋನ್ ಶೋಧ- ಸಚಿವ ಈಶ್ವರ ಖಂಡ್ರೆ
ಹಾರ್ಮುಜ್ ಜಲಸಂಧಿ ತೆರೆಯಿರಿ ಇಲ್ಲವೇ ನರಕ ಅನುಭವಿಸ್ತೀರಿ: ಇರಾನ್ ಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಖಡಕ್ ವಾರ್ನಿಂಗ್!








