ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಸೌತೆಕಾಯಿ ಹೆಚ್ಚು ಪೋಷಕಾಂಶಗಳಿರುವ ತರಕಾರಿ. ಇದರಲ್ಲಿ ತಾಮ್ರ, ಮೆಗ್ನೇಶಿಯಮ್, ವಿಟಮಿನ್ ಸಿ, ಕೆ, ಪೊಟ್ಯಾಶಿಯಂ ಹಾಗು ಮ್ಯಾಂಗನೀಸ್ ಅಂಶಗಳಿವೆ. ನೀರಿನಂಶವೂ ಕೂಡ ಹೇರಳವಾಗಿರುತ್ತದೆ. ಬಿಸಿಲಿಗೆ ದಣಿದು ಬಂದು ಒಂದು ಸೌತೆಕಾಯಿ ತಿಂದರೆ ದೇಹಕ್ಕೆ ಬೇಕಾಗುವಷ್ಟು ನೀರಿನ ಅಂಶ ಈ ತರಕಾರಿ ನೀಡುತ್ತದೆ. ಇದನ್ನು ಹೆಚ್ಚಾಗಿ ಸಲಾಡ್‌ಗಳಲ್ಲಿ ಬಳಸುತ್ತಾರೆ ಏಕೆಂದರೆ ಇದರಿಂದ ದೇಹಕ್ಕೆ ಅನೇಕ ಪೋಷಕಾಂಶಗಳು ಒಟ್ಟಿಗೆ ಒದಗುತ್ತವೆ. ಹಸಿ ಸೌತೆಕಾಯಿಯಲ್ಲಿ ಶೇಕಡಾ 95ರಷ್ಟು ನೀರಿನ ಪ್ರಮಾಣವಿದೆ.
ಆದರೆ ಒಂದು ಪ್ರಶ್ನೆ ಇದೆ. ಹಸಿ ಸೌತೆಕಾಯಿ ಸೇವಿಸಿದ ಮೇಲೆ ನೀರು ಕುಡಿಯಬಹುದೇ ಅಥವಾ ಕುಡಿಯಬಾರದೇ ಎಂದು. ಆಹಾರ ತಜ್ಞರ ಅಭಿಪ್ರಾಯದಂತೆ ಸೌತೆಕಾಯಿ ತಿಂದ ಮೇಲೆ ಯಾವುದೇ ಕಾರಣಕ್ಕೂ ನೀರು ಸೇವಿಸಬಾರದು. ಇದರಿಂದ ಆರೋಗ್ಯದ ಮೇಲೆ ಭಾರೀ ಕೆಟ್ಟ ಪರಿಣಾಮ ಬೀರಬಹುದು ಎಂದು ಸಹ ಹೇಳುತ್ತಾರೆ.
ಸೌತೆಕಾಯಿಯಲ್ಲಿ ಈಗಾಗಲೇ ಹೇರಳ ಪ್ರಮಾಣದ ನೀರಿನ ಅಂಶ ಹಾಗು ಪೋಷಕಾಂಶಗಳು ಇವೆ. ಇದರ ಮೇಲೆಯೂ ನೀರು ಸೇವಿಸಿದರೆ ದೇಹ ಆ ಪೋಷಕಾಂಶಗಳಿಂದ ವಂಚಿತವಾಗುತ್ತದೆ. ಸೌತೆಕಾಯಿ ತಿಂದ ನಂತರ ನೀರು ಸೇವಿಸಿದರೆ ನೈಸರ್ಗಿಕವಾಗಿ ಆಗುವ ಜೀರ್ಣಕ್ರಿಯೆ ಹಾಗು ಹೀರಿಕೊಳ್ಳುವ ಪ್ರಕ್ರಿಯೆಗೆ ತೊಂದರೆ ಉಂಟಾಗುತ್ತದೆ.
ಸಹಜವಾದ ಜೀರ್ಣಕ್ರಿಯೆಗೆ ಪಿಎಚ್ ಮಟ್ಟ ತುಂಬಾ ಅಗತ್ಯ. ಇನ್ನು ಸೌತೆಕಾಯಿ ತಿಂದ ನಂತರ ನೀರು ಸೇವಿಸಿದರೆ ಪಿಎಚ್ ಮಟ್ಟ ದುರ್ಬಲಗೊಳ್ಳುತ್ತದೆ. ಇದು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಉಂಟು ಮಾಡುತ್ತದೆ.
ಮಲಬದ್ಧತೆ ಸಮಸ್ಯೆಗೆ ಸೌತೆಕಾಯಿ ಸೇವನೆ ತುಂಬಾ ಒಳ್ಳೆಯದು. ಇದರ ನಿರಂತೆ ಸೇವನೆಯಿಂದ ಮಲಬದ್ಧತೆ ಸಮ್ಯೆಯನ್ನು ನಿವಾರಿಸಿಕೊಳ್ಳಬಹುದು. ಸೌತೆಕಾಯಿ ತಿಂದ ನಂತರ ನೀರು ಸೇವಿಸಿದರೆ ದೇಹದಲ್ಲಿ ಅತಿಸಾರ ಉಂಟಾಗುತ್ತದೆ. ಹಾಗಾಗಿ ಇಂತಹ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ಸೌತೆಕಾಯಿ ತಿಂದ ನಂತರ ಯಾವುದೇ ಕಾರಣಕ್ಕೂ ನೀರು ಸೇವಿಸಬೇಡಿ ಎಂತು ತಜ್ಞರು ಹೇಳುತ್ತಾರೆ. ಒಂದು ವೇಳೆ ಸೌತೆಕಾಯಿ ತಿಂದ ನಂತರವೂ ನಿಮಗೆ ನೀರು ಕುಡಿಯಲೇಬೇಕು ಎಂತೆನಿಸಿದರೆ ಕನಿಷ್ಟ ಪಕ್ಷ 15 ನಿಮಿಷ ಬಿಟ್ಟು ನೀರು ಸೇವಿಸಿ.