ಬೆಂಗಳೂರು: ರಾಜ್ಯಾಧ್ಯಕ್ಷರ ಹಾಗೂ ವಿರೋದ ಪಕ್ಷದ ನಾಯಕರ ಮಾತಿಗೆ ಸ್ವಂತ BJP ಪಕ್ಷದಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ, ಹೀಗಿರುವಾಗ ನಾನು ಬಿಜೆಪಿಗರು ರಾಜೀನಾಮೆ ಕೊಡು ಎಂದಾಕ್ಷಣ ಕೊಟ್ಟುಬಿಡಬೇಕೆ!? ಎಂಬುದಾಗಿ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟಿ ನೀಡಿದ್ದಾರೆ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಸ್ವಂತ ಸಹೋದರನ ವಂಚನೆ ಪ್ರಕರಣ ಹೊರಬಂದಾಗ “ನನಗೆ ಸಂಬಂಧವೇ ಇಲ್ಲ” ಎಂದಿದ್ದ ಶ್ರೀ ಪ್ರಹ್ಲಾದ್ ಜೋಶಿಯವರ ರಾಜೀನಾಮೆಯನ್ನು ಬಿಜೆಪಿಯವರು ಕೇಳಿದ್ದರೇ? ನೇರವಾಗಿ ಜೋಶಿಯವರ ಹೆಸರಿನಲ್ಲೇ ವಂಚನೆ ನಡೆದಿತ್ತಲ್ಲವೇ? ಎಂದು ಕೇಳಿದ್ದಾರೆ.
ಬಿಜೆಪಿ ಆಡಳಿತದ ಸಂದರ್ಭದಲ್ಲಿ ಡ್ರಗ್ಸ್ ದಂಧೆಯ ಪ್ರಕರಣದಲ್ಲಿ ಚಿತ್ರನಟಿಯೊಂದಿಗೆ ವಿರೋಧ ಪಕ್ಷದ ನಾಯಕರ ಆಪ್ತನ ಬಂಧನವಾಗಿತ್ತಲ್ಲವೇ? ಆಗ ಅವರು ತಮ್ಮ ಆಪ್ತನ ಹಗರಣದ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದರೇ? ಸ್ವಂತ ತಂದೆಯೇ ಪೊಕ್ಸೋ ಪ್ರಕರಣ ಎದುರಿಸುತ್ತಿರುವಾಗ ವಿಜಯೇಂದ್ರ ರಾಜೀನಾಮೆ ಕೊಡಬೇಕಲ್ಲವೇ? ತಂದೆಯ ಮೇಲೆ ಕೋವಿಡ್ ಹಗರಣದಲ್ಲಿ ಲೂಟಿಗೈದ ಆರೋಪವಿರುವಾಗ ಶ್ರೀ ವಿಜಯೇಂದ್ರ ಯಾವ ಮುಖ ಹೊತ್ತುಕೊಂಡು ತಿರುಗುತ್ತಿದ್ದಾರೆ? ಎಂದು ಹೇಳಿದ್ದಾರೆ.
ಬಿಜೆಪಿಯ ನಿಯೋಗವು ಸತ್ಯಶೋಧನೆಗಾಗಿ ಭೇಟಿ ನೀಡುವ ಜಾಗಗಳು ಬೇರೆಯೇ ಇದ್ದಾವೆ. – ಬಿಜೆಪಿಯ ಸತ್ಯಶೋಧನ ನಿಯೋಗ ಮುನಿರತ್ನನವರ ಮನೆಗೆ ಹಾಗೂ ಅವರಿಂದ ಸಂತ್ರಸ್ತರಾದ ಮಹಿಳೆಯರ ಮನೆಗೆ ಹೋಗಿ ಸತ್ಯ ಶೋಧನೆ ಮಾಡಲಿ.
– ಕೋವಿಡ್ ಹಗರಣದ ಬಗ್ಗೆ ನ್ಯಾ. ಕುನ್ಹಾ ಅವರ ವರದಿಯ ಅಂಶಗಳ ಬಗ್ಗೆ ಬಿಜೆಪಿಯ ನಿಯೋಗ ಸತ್ಯಶೋಧನೆ ಮಾಡಲಿ
– ವಿಜಯೇಂದ್ರರ ವಿರುದ್ಧ EDಯಲ್ಲಿ ದಾಖಲಾಗಿರುವ ಅಕ್ರಮ ಹಣ ವರ್ಗಾವಣೆಯ ಬಗ್ಗೆ ಸತ್ಯ ಶೋಧನೆ ಮಾಡಲಿ
– ವಿಜಯೇಂದ್ರ ಮಾರಿಷಸ್, ಮಾಲ್ಡಿವ್ಸ್ ನಲ್ಲಿ ಅಕ್ರಮ ಹಣ ಹೂಡಿಕೆ ಮಾಡಿದ್ದಾರೆ ಎಂಬ ಯತ್ನಾಳ್ ಅವರ ಹೇಳಿಕೆಯ ಬಗ್ಗೆ ಸತ್ಯಶೋಧನೆ ಮಾಡಲಿ
– ಸರ್ಕಾರ ಉರುಳಿಸಲು ಒಂದೂವರೆ ಸಾವಿರ ಕೋಟಿ ಹಣ ಸಂಗ್ರಹಿಸಿ ಇಡಲಾಗಿದೆ ಎಂಬ ಬಿಜೆಪಿ ಶಾಸಕರ ಹೇಳಿಕೆಯ ಬಗ್ಗೆ, ಆ ಹಣದ ಮೂಲದ ಬಗ್ಗೆ ಸತ್ಯಶೋಧನೆ ಮಾಡಲಿ.
– ಕೆಕೆಆರ್ ಡಿಬಿಯಲ್ಲಿ ನೂರಾರು ಕೋಟಿ ಹಗರಣ ನಡೆಸಿದ್ದರಲ್ಲ, ಅದರ ಬಗ್ಗೆ ಸತ್ಯಶೋಧನೆ ಮಾಡಲಿ.
– ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ಹಗರಣ, ಭೋವಿ ಅಭಿವೃದ್ಧಿ ನಿಗಮ ಹಾಗು ನೀರಾವರಿ ಹಗರಣದ ಬಗ್ಗೆ ಸತ್ಯಶೋಧನೆ ಮಾಡಲಿ.
ಸುಳ್ಳಿನ ಶೂರರು ಸತ್ಯದ ಶೋಧನೆ ಮಾಡುತ್ತೇವೆ ಎನ್ನುವುದು ದೊಡ್ಡ ಜೋಕ್, ಬಿಜೆಪಿಯವರಿಗೆ ಸುಳ್ಳಿನ ಶೋಧನೆ ಮಾಡುವುದು ಮಾತ್ರ ತಿಳಿದಿದೆ ಎಂದು ಕಿಡಿಕಾರಿದ್ದಾರೆ.
ಸ್ವಂತ ಸಹೋದರನ ವಂಚನೆ ಪ್ರಕರಣ ಹೊರಬಂದಾಗ “ನನಗೆ ಸಂಬಂಧವೇ ಇಲ್ಲ” ಎಂದಿದ್ದ ಶ್ರೀ ಪ್ರಹ್ಲಾದ್ ಜೋಶಿಯವರ ರಾಜೀನಾಮೆಯನ್ನು ಬಿಜೆಪಿಯವರು ಕೇಳಿದ್ದರೇ?
ನೇರವಾಗಿ ಜೋಶಿಯವರ ಹೆಸರಿನಲ್ಲೇ ವಂಚನೆ ನಡೆದಿತ್ತಲ್ಲವೇ?ಬಿಜೆಪಿ ಆಡಳಿತದ ಸಂದರ್ಭದಲ್ಲಿ ಡ್ರಗ್ಸ್ ದಂಧೆಯ ಪ್ರಕರಣದಲ್ಲಿ ಚಿತ್ರನಟಿಯೊಂದಿಗೆ ವಿರೋಧ ಪಕ್ಷದ ನಾಯಕರ ಆಪ್ತನ ಬಂಧನವಾಗಿತ್ತಲ್ಲವೇ?…
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) December 29, 2024
‘ಇಡೀ ದೇಶ ಒಂದಾಗಲಿ’ ಎಂಬುದು ಮಹಾಕುಂಭದ ಸಂದೇಶವಾಗಿದೆ: ಪ್ರಧಾನಿ ಮೋದಿ | PM Modi
ಡಿ.31ರಂದು ಅಲ್ಲಿ ಇಲ್ಲಿ ಯಾಕೆ? ‘ಫ್ಯಾಮಿಲಿ ಸಹಿತ’ ಇಲ್ಲಿಗೆ ಹೋಗಿ, ಹೊಸ ವರ್ಷಾಚರಣೆ ಮಾಡಿ