ಶಿವಮೊಗ್ಗ: ಜಿಲ್ಲೆಯ ಆನಂದಪುರ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರ ಗುಂಡಿನ ಸದ್ದು ಕೇಳಿ ಬಂದಿದೆ. 30 ಪ್ರಕರಣಗಳಲ್ಲಿ ಭಾಗಿಯಾಗಿದ್ದಂತ ಆರೋಪಿಯ ಕಾಲಿಗೆ ಪೊಲೀಸರು ಗುಂಡೇಟು ನೀಡಿ ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರ ಪೊಲೀಸರು 30 ಪ್ರಕರಣದಲ್ಲಿ ಬೇಕಿದ್ದಂತ ಆರೋಪಿಯು ಇರುವಂತ ಖಚಿತ ಸುಳಿವು ಸಿಕ್ಕಿತ್ತು. ಆನಂದಪುರ ಠಾಣೆಯ ಪಿಎಸ್ಐ ಯುವರಾಜ್, ಹೆಡ್ ಕಾನ್ಸ್ ಸ್ಟೇಬಲ್ ಅಶೋಕ್ ಸೇರಿದಂತೆ ತಂಡವು ಆರೋಪಿ ಶ್ಯಾಡೋ ಸಚಿನ್ ಎಂಬಾತನ ಬಂಧನಕ್ಕೆ ತೆರಳಿತ್ತು.
ಈ ವೇಳೆಯಲ್ಲಿ ಪೊಲೀಸರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ತಪ್ಪಿಸಿಕೊಳ್ಳೋದಕ್ಕೆ ಆರೋಪಿ ಶ್ಯಾಡೋ ಸಚಿನ್ ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ಆತ್ಮ ರಕ್ಷಣೆಗಾಗಿ ಆನಂದಪುರ ಪಿಎಸ್ಐ ಯುವರಾಜ್ ಆರೋಪಿಯ ಕಾಲಿಗೆ ಗುಂಡೇಟು ನೀಡಿ, ಬಂಧಿಸಿದ್ದಾರೆ.
ಪೊಲೀಸರ ಗುಂಡೇಟಿನಿಂದ ಗಾಯಗೊಂಡಿರುವಂತ ಆರೋಪಿ ಶ್ಯಾಡೋ ಸಚಿನ್ ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಮಚ್ಚಿನಿಂದ ಹಲ್ಲೆಗೊಳಗಾದಂತ ಹೆಡ್ ಕಾನ್ಸ್ ಸ್ಟೇಬಲ್ ಅಶೋಕ್ ನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಆಶೀರ್ವಾದ್ ಸ್ಮಾರ್ಟ್ ಇಂಡಿಯಾ ಕಾರ್ಯಕ್ರಮದ ಮೂಲಕ ಅಯೋಡಿನ್ ಕೊರತೆ ಬಗ್ಗೆ ಜಾಗೃತಿ
BIG NEWS : ಬೆಂಗಳೂರಲ್ಲಿ ಐಪಿಎಲ್ ಸಂಭ್ರಮಾಚರಣೆ ವೇಳೆ ಸಾರ್ವಜನಿಕರಿಗೆ ತೊಂದರೆ ಕೊಟ್ರೆ ಕ್ರಮ | IPL-2025 ಫೈನಲ್