ರಾಮನಗರ : ರಾಮನಗರದಲ್ಲಿ ಮಹಿಳೆಯೊಬ್ಬಳು ತನ್ನ ಒಂದು ತಿಂಗಳ ಗಂಡು ಮಗುವನ್ನು 1.50 ಲಕ್ಷ ರೂ.ಗೆ ಮಾರಾಟ ಮಾಡಿರುವ ಘಟನೆ ರಾಮನಗರದದ ಯಾರಬ್ ನಗರದಲ್ಲಿ ನಡೆದಿದೆ.
ಮಹಿಳೆಯೊಬ್ಬರು ತನ್ನ ಒಂದು ತಿಂಗಳ ಗಂಡು ಮಗುವನ್ನು ಈಚೆಗೆ ಬೆಂಗಳೂರಿನ ಮಹಿಳೆಯೊಬ್ಬರಿಗೆ 1.50 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ಮಗು ಮಾರಾಟ ಮಾಡಿದ ವಿಷಯ ತಿಳಿದ ಮಹಿಳೆಯ ಪತಿ ಸದ್ದಾಂ ಪಾಷಾ ರಾಮನಗರ ಪುರ ಠಾಣೆಗೆ ದೂರು ನೀಡಿದ್ದು, ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆತನ ಪತ್ನಿ ಹಾಗೂ ಮಧ್ಯಸ್ಥಿಕೆ ವಹಿಸಿದ ಮೂವರನ್ನು ಬಂಧಿಸಿದ್ದಾರೆ.
ಮಾರಾಟ ಮಾಡಲಾಗಿದ್ದ ಒಂದು ತಿಂಗಳ ಹಸುಗೂಸು ಮೊಹಮ್ಮದ್ ಅಲಿ ಬೇಗ್‌ನನ್ನು ಪೊಲೀಸರು ವಶಕ್ಕೆ ಪಡೆದು, ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಒಪ್ಪಿಸಿದ್ದಾರೆ. ಮಗುವಿನ ತಾಯಿ ನಸ್ರೀನ್ ತಾಜ್, ಮಾರಾಟಕ್ಕೆ ಮಧ್ಯಸ್ಥಿಕೆ ವಹಿಸಿದ್ದ ಅಸ್ಲಂ, ಬೆಂಗಳೂರಿನ ತಾರನಂ ಸುಲ್ತಾನ ಹಾಗೂ ಮಗು ಖರೀದಿಸಿದ ಶಾಜಿಯಾ ಬಾನು ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮಧ್ಯಸ್ಥಿಕೆ ವಹಿಸಿದ್ದ ಮತೋರ್ವ ಆರೋಪಿ ಫೂಲ್‌ಬಾಗ್‌ನ ಫಾಹಿಮಾ ತಲೆ ಮರೆಸಿಕೊಂಡಿದ್ದಾಳೆ.