ಬೆಂಗಳೂರು: ರಾಜ್ಯದಲ್ಲಿ ಹೃದಯಾಘಾತದ ಸಾವಿನ ಸರಣಿ ಮುಂದುವರಿದಿದೆ. ನಿನ್ನೆ ಒಂದೇ ದಿನ ರಾಜ್ಯದ ವಿವಿಧೆಡೆ ಐವರು ಸಾವನ್ನಪ್ಪಿದ್ದಾರೆ.
ಮಂಡ್ಯದಲ್ಲಿ ಹೃದಯಾಘಾತದಿಂದ ತೆಂಗಿನಕಾಯಿ ವ್ಯಾಪಾರಿ ಸಾವು
ಮದ್ದೂರು ತಾಲೂಕಿನ ನಿಡಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಗಬೋರನದೊಡ್ಡಿ ಗ್ರಾಮದ ತೆಂಗಿನ ಕಾಯಿ ವ್ಯಾಪಾರಿಯಾದ ರಾಜಣ್ಣ (ಲಿಂಗರಾಜು) ಅವರು ಸೋಮವಾರದಂದು ವೇಳೆಯಲ್ಲಿ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಅವರನ್ನು ಸ್ಥಳೀಯ ಶ್ರೀ ಚಾಮುಂಡೇಶ್ವರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
KSRTC ನೌಕರ ಆರ್ಟ್ ಅಟ್ಯಾಕ್ ನಿಂದ ಸಾವು
ಕೋಲಾರ ಜಿಲ್ಲೆಯಲ್ಲಿ ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಕೆ ಎಸ್ ಆರ್ ಟಿ ಸಿ ನೌಕರರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವಂತ ಘಟನೆ ನಡೆದಿದೆ. ಅನಾರೋಗ್ಯದಿಂದ ಬಳಲುತ್ತಿದ್ದಂತ ಮುತ್ತಕಪಲ್ಲಿ ಗ್ರಾಮದ ನಿವಾಸಿ ಬಾಬಾಜಾನ್(53) ಎಂಬ ಕೆ ಎಸ್ ಆರ್ ಟಿ ಸಿ ನೌಕರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕೆ ಎಸ್ ಆರ್ ಟಿ ಸಿ ಡಿಪೋದಲ್ಲಿ ಬಾಬಾಜಾನ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು. ಚಾಲಕರಾಗಿ ಕೆಲಸಕ್ಕೆ ಸೇರಿದ್ದಂತ ಬಾಬಾಜಾನ್ ಅವರು ಅಪಘಾತದಲ್ಲಿ ಕಾಲಿಗೆ ಪೆಟ್ಟಾದ ನಂತ್ರ ಘಟಕದಲ್ಲೇ ಕೆಲಸ ಮಾಡಿಕೊಂಡಿದ್ದರು.
ಭಾನುವಾರದಂದು ಕೂಡ ಕರ್ತವ್ಯಕ್ಕೆ ಹಾಜರಾಗಿದ್ದಂತ ಬಾಬಾಜಾನ್, ಮನೆಗೆ ತೆರಳಿದ ನಂತ್ರ ಸೋಮವಾರದಂದು ರಾತ್ರಿ ಹೃದಯಾಘಾತವಾಗಿದೆ. ಹೀಗಾಗಿ ಬಾಬಾಜಾನ್ ಅವರು ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
ಶಾಲೆಗೆ ಹೋಗುವಾಗಲೇ `ಹೃದಯಾಘಾತ’ದಿಂದ 6ನೇ ತರಗತಿ ವಿದ್ಯಾರ್ಥಿನಿ ಸಾವು
ಶಾಲೆಗೆ ತೆರಳುತ್ತಿರುವಾಗಲೇ ಕುಸಿದು ಬಿದ್ದು ವಿದ್ಯಾರ್ಥಿನಿಯೊಬ್ಬಳು ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಂಡೂರು ತಾಲೂಕಿನ ಕಾಳಿಂಗೇರಿಯಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಕಾಳಂಗೇರಿಯ ದೀಕ್ಷಾ (12) 6ನೇ ತರಗತಿಯಲ್ಲಿ ಓದುತ್ತಿದ್ದ ದೀಕ್ಷಾ ಎಂದಿನಂತೆ ಸಿದ್ಧಳಾಗಿ ಶಾಲೆಗೆ ಹೋಗುತ್ತಿದ್ದಳು. ಶಾಲೆಗೆ ತೆರಳುವಾಗ ಏಕಾಏಕಿ ಕುಸಿದು ಬಿದ್ದಿದ್ದ ಬಾಲಕಿ ದೀಕ್ಷಾಳನ್ನ ಕೂಡಲೇ ಕುಟುಂಬಸ್ಥರು ಸಂಡೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲು ಮುಂದಾಗಿದ್ದರು. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ದೀಕ್ಷಾ ಮೃತಪಟ್ಟಿದ್ದಾಳೆ. ದೀಕ್ಷಾ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ಸಂಬಂಧ ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಚೇರಿಗೆ ತೆರಳುವಾಗ ಕುಸಿದುಬಿದ್ದು ‘FDA’ ನೌಕರ ಸಾವು
ದಕ್ಷಿಣ ಕನ್ನಡದಲ್ಲಿ ಕಚೇರಿಗೆ ತೆರಳುವಾಗಲೇ FDA ನೌಕರರೊಬ್ಬರು ಕುಸಿದು ಬಿದ್ದು ಸಾವನಪ್ಪಿರುವ ಘಟನೆ ವರದಿಯಾಗಿದೆ. ಹೌದು ಹೃದಯಾಘಾತದಿಂದ FDA ನೌಕರ ಬಲಿಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಈ ಒಂದು ಘಟನೆ ನಡೆದಿದೆ. ಹೃದಯಘಾತದಿಂದ ಹಾಸನ ಮೂಲದ ಸತೀಶ್ (46) ಇದೀಗ ಸಾವನಪ್ಪಿದ್ದಾರೆ. ಬೆಳ್ತಂಗಡಿ ತಾಲೂಕು ಆಡಳಿತ ಸೌಧದಲ್ಲಿ ಸತೀಶ್ ಎಫ್ಡಿಎ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಬೆಳಿಗ್ಗೆ ಮನೆಯಲ್ಲಿ ಸ್ನಾನ ಮಾಡಿ ಬರುವಾಗ ಸತೀಶ್ ಕುಸಿದು ಬಿದ್ದಿದ್ದಾರೆ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಪತ್ನಿ ಜಯಶ್ರೀ ತೆರಳಿದ್ದಾರೆ.ಆಸ್ಪತ್ರೆಗೆ ಹೋದಾಗ ಸತೀಶ್ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಹಾಸ್ಯ ಕಲಾವಿದ ಮೌನೇಶ್ ಆಚಾರ್ಯ ಸಾವು
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಹಾಸ್ಯ ಕಲಾವಿದರಾದ ಮೌನೇಶ್ ಆಚಾರ್ಯ ಮಾಣಿ ಕಾಪಿಕಾಡು(42) ಹೃದಯಾಘಾತದಿಂದ ನಿಧನರಾಗಿದ್ದಾರೆ. ನೆಲ್ಯಾಡಿಯ ನಮ್ಮ ಕಲಾವಿದರು ತಂಡದಲ್ಲಿ ಕಲಾವಿದನಾಗಿ ಹಾಸ್ಯ, ಪೋಷಕ ಪಾತ್ರದಲ್ಲಿ ಗುರುತಿಸಿಕೊಂಡಿರುವವರು. ಸಾಮಾಜಿಕ ಜಾಲತಾಣಗಳಲ್ಲೂ ಇವರ ಹಾಸ್ಯ ಅಭಿನಯ ಪ್ರಖ್ಯಾತಿಯನ್ನು ಪಡೆದಿದೆ.