ಬೆಳಗಾವಿ : ಇತ್ತೀಚಿಗೆ ಹೃದಯಾಘಾತದ ಪ್ರಕರಣಗಳು ಹೆಚ್ಚಳವಾಗಿದ್ದು, ಶಾಲೆಯಲ್ಲೇ ಶಿಕ್ಷಕರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆ ಕಾಗವಾಡದ ಮಂಗಸೂಳಿ ಗ್ರಾಮದ ಸರ್ಕಾರಿ ಎಂಆರ್ ಎಂ ಕೆಪಿಎಸ್ ಪ್ರೌಢಶಾಲೆಯಲ್ಲಿ ಹೃದಯಾಘಾತದಿಂದ ಶಿಕ್ಷಕರೊಬ್ಬರು ಮೃತಪಟ್ಟಿದ್ದಾರೆ. ಭರತ್ ಶಿಂದೆ(47) ಮೃತಪಟ್ಟ ಶಿಕ್ಷಕ.
ರಾಯಬಾಗ ತಾಲೂಕಿನ ಬಿರಡಿ ಗ್ರಾಮದ ಭರತ ಶಿಂದೆ ಅವರು ಮಂಗಸೂಳಿ ಗ್ರಾಮದ ಸರ್ಕಾರಿ ಎಂಆರ್ ಎಂ ಕೆಪಿಎಸ್ ಪ್ರೌಢಶಾಲೆಯಲ್ಲಿ ಎದೆನೋವಿನಿಂದ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರು ಮತ್ತು ಪುತ್ರಿ ಇದ್ದಾರೆ.