ಹೈದರಾಬಾದ್ : ವಾಲಿಬಾಲ್ ಆಡುವಾಗಲೇ ವಿದ್ಯಾರ್ಥಿಯೊಬ್ಬ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ತೆಲಂಗಾಣದ ವನಪರ್ತಿ ಜಿಲ್ಲೆಯಲ್ಲಿ ನಡೆದಿದೆ.
ಪೆದ್ದಮಂದಡಿ ಮಂಡಲದ ಬಲಿಜಪಲ್ಲಿ ಗ್ರಾಮದ ಜೆಡ್.ಪಿ.ಹೆಚ್.ಎಸ್. ಶಾಲೆಯ ಆವರಣದಲ್ಲಿ ಸಿಎಂ ಕಪ್ ವಾಲಿಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿ ಮೈದಾನದಲ್ಲಿಯೇ ಕುಸಿದುಬಿದ್ದು ಮೃತಪಟ್ಟಿದ್ದಾನೆ. ವಿದ್ಯಾರ್ಥಿಯನ್ನು ಸಾಯಿ ಪುನೀತ್(15)ಎಂದು ಗುರುತಿಸಲಾಗಿದೆ.
10ನೇ ತರಗತಿ ವಿದ್ಯಾರ್ಥಿ ಸಾಯಿ ಪುನೀತ್ ಪಂದ್ಯದ ವೇಳೆ ಏಕಾಏಕಿ ಕುಸಿತು ಬಿದ್ದಿದ್ದ, ಕೂಡಲೇ ಬಾಲಕನ್ನು ಶಾಲೆಯ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ. ವಿದ್ಯಾರ್ಥಿ ಹೃದಯಘಾತದಿಂದ ಈ ಮೊದಲೇ ಮೃತಪಟ್ಟಿರುವುದಾಗಿ ಪರೀಕ್ಷಿಸಿದ ವೈದ್ಯರು ದೃಢಪಡಿಸಿದ್ದಾರೆ.