ಬೆಂಗಳೂರು : ಚಿಕಿತ್ಸೆಗೆ ಹಣವಿಲ್ಲದೇ ಬೆಂಗಳೂರಿನಲ್ಲಿ ಸ್ವಂತ ಮಗನಿಗೆ ಪಾಪಿ ತಂದೆಯೊಬ್ಬ ವಿಷ ಹಾಕಿರುವ ಘಟನೆ ನಡೆದಿದೆ.
ಬೆಂಗಳೂರಿನ ಬಾಗಲೂರುನಲ್ಲಿ ಮಗನ ಚಿಕಿತ್ಸೆಗೆ ಹಣವಿಲ್ಲದೇ ಬುದ್ದಿಮಾಂದ್ಯ ಮಗುವಿಗೆ ತನ್ನ ಕೈಯ್ಯಾರೆ ವಿಷ ಹಾಕಿದ್ದಾನೆ. ಮುನಿಕೃಷ್ಣ ಎಂಬಾತ ಸ್ವಂತ ಮಗನಿಗೆ ಕೀಟನಾಶಕ ಕುಡಿಸಿದ್ದಾನೆ.
ಸತ್ಯಾ-ಮುನಿಕೃಷ್ಣ ದಂಪತಿಯ 2.5 ವರ್ಷದ ಮಗ ಜೋಯಲ್ ಗೆ ವಿಷ ಕುಡಿಸಿದ್ದಾನೆ. ಡಿಸೆಂಬರ್ 22 ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.








