ದಾವಣಗೆರೆ : ಹಕ್ಕಿಪಿಕ್ಕಿ ಜನಾಂಗದ ಅಪ್ರಾಪ್ತ ಬಾಲಕನೊಬ್ಬನನ್ನು ಕಳ್ಳತನದ ಆರೋಪದ ಮೇಲೆ ಬೆತ್ತಲೆಗೊಳಿಸಿ ಮರ್ಮಾಂಗಕ್ಕೆ ಕೆಂಪಿರುವೆ ಬಿಟ್ಟು ಚಿತ್ರಹಿಂಸೆ ನಡೆಸಿರುವ ಭೀಕರ ಘಟನೆ ಚೆನ್ನಗಿರಿ ತಾಲೂಕಿನ ಅಸ್ತಾಪನಹಳ್ಳಿಯಲ್ಲಿ ನಡೆದಿದೆ.
ಹಕ್ಕಿ ಪಿಕ್ಕಿ ಸಮುದಾಯಕ್ಕೆ ಸೇರಿದ ಅಪ್ರಾಪ್ತ ಬಾಲಕನಿಗೆ ಅಡಿಕೆ ಮರಕ್ಕೆ ಕಟ್ಟಿ ಹಾಕಿ ಥಳಿಸಲಾಗಿದೆ. ಮರ್ಮಾಂಗಕ್ಕೆ ಕೆಂಪಿರುವೆ ಬಿಟ್ಟು ವಿಕೃತಿ ಮೆರೆಯಲಾಗಿದೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ದುಷ್ಕರ್ಮಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಗಿಡಮೂಲಿಕೆ ಮಾರಿ ಜೀವನ ನಡೆಸುತ್ತಿದ್ದ ಈ ಬಾಲಕನ ಕುಟುಂಬಸ್ಥರು ಹಾಗೂ ಪೋಷಕರು ವಿದೇಶಕ್ಕೆ ತೆರಳಿದ್ದಾರೆ ಎನ್ನಲಾಗಿದ್ದು,ಈ ಬಾಲಕ ಪದೇ ಪದೇ ಕಳವು ನಡೆಸುತ್ತಿದ್ದ ಎಂದು ಆರೋಪಿಸಲಾಗಿತ್ತು. ಸದ್ಯ ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕ್ರಮ ಕೈಗೊಂಡಿದ್ದಾರೆ. 10 ಜನರ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡಿದ್ದು, ಓರ್ವ ಯುವಕನನ್ನು ಬಂಧಿಸಲಾಗಿದ್ದು, ಉಳಿದವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.