ಬೆಂಗಳೂರು : ಬೆಂಗಳೂರಿನಲ್ಲಿ ಮಗಳ ಮೇಲೆ ಮಚ್ಚು ಬೀಸಿದ ತಾಯಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ದೇವಸ್ಥಾನದಲ್ಲಿ ಮಗಳ ನರಬಲಿಗೆ ಮಹಿಳೆ ಮುಂದಾಗಿದ್ದರು ಎನ್ನು ಅನುಮಾನ ಶುರುವಾಗಿದೆ.
ಬೆಂಗಳೂರಿನ ಅಗ್ರಹಾರ ಲೇಔಟ್ ನಲ್ಲಿ ಈ ಘಟನೆ ನಡೆದಿದ್ದು, ದೇವರಿಗೆ ತಲೆಬಾಗಿ ನಮಸ್ಕಾರ ಮಾಡುವಾಗ ತಾಯಿಯೇ ಮಗಳ ಮೇಲೆ ಮಚ್ಚು ಬೀಸಿರುವ ಘಟನೆ ನಡೆದಿದೆ. ಇಬ್ಬರೂ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಮನೆಯಿಂದಲೇ ಒಂದೊಂದು ಮಚ್ಚು ತಂದಿದ್ದರು.
ತಾಯಿ ಸರೋಜಮ್ಮ ಮಗಳಾದ ರಮ್ಯಾ ದೇವಸ್ಥಾನದಲ್ಲಿ ದೇವರಿಗೆ ತಲೆಬಾಗಿ ನಮಸ್ಕಾರ ಮಾಡುವಾಗ ಮಚ್ಚಿನಿಂದ ರಮ್ಯಾ ಕುತ್ತಿಗೆಗೆ ಮೇಲೆ ಭೀಕರವಾದ ದಾಳಿ ಮಾಡುತ್ತಾರೆ. ಊರ ದೇವಸ್ಥಾನದ ಮುಂದೆ ತಾಯಿ ತನ್ನ ಮಗಳ ನೆತ್ತರು ಚೆಲ್ಲಾಡಿದ್ದಾಳೆ. ಹಲ್ಲೆ ನಡೆಸಿದ ಬಳಿಕ ಸರೋಜಮ್ಮ ಎಸ್ಕೇಪ್ ಆಗಿದ್ದು, ಪೊಲೀಸರು ಆಕೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. 22 ವರ್ಷದ ರಮ್ಯಾ ತಾಯಿಯಿಂದಲೇ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.








