ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಕೆಲಸಕ್ಕೆ ಹೋಗುವಂತೆ ಬುದ್ದಿವಾದ ಹೇಳಿದ ಹೆತ್ತ ತಾಯಿಯನ್ನೇ ಪಾಪಿ ಮಗನೊಬ್ಬ ಹತ್ಎಯ ಮಾಡಿರುವ ಘಟನೆ ನಡೆದಿದೆ.
ಬೆಂಗಳೂರಿನ ಶ್ರೀಕಂಠೇಶ್ವರ ಲೇಔಟ್ ನಿವಾಸಿ ಆಯೇಷಾ (50)ಯನ್ನು ಸ್ವಂತ ಮಗ ಶುಫಿಯಾನ್ (32) ಕೆಲಸಕ್ಕೆ ಹೋಗುವ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿತ್ತು. ಸೈಕೋನಂತೆ ವರ್ತಿಸುತ್ತಿದ್ದ ಶುಫಿಯಾನ್ ಚಾಕುವಿನಿಂದ ಇರಿದು ತಾಯಿ ಮೇಲೆ ಹಲ್ಲೆ ಮಾಡಿದ್ದ, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ತೀವ್ರ ರಕ್ತಸ್ರಾವದಿಂದ ಚಿಕಿತ್ಸೆ ಫಲಕಾರಿಯಾಗದೇ ಆಯೇಷಾ ಸಾವನ್ನಪ್ಪಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪುಟ್ಟೇನಹಳ್ಳಿ ಪೊಲೀಸರು ಆರೋಪಿ ಶುಫಿಯಾನ್ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.