ಮೈಸೂರು: ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದ್ದು, ಆರ್ ಎಸ್ಎಸ್ ಪಥಸಂಚಲನದ ವೇಳೆ ಕುಸಿದುಬಿದ್ದು ಕಾರ್ಯಕರ್ತರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಆರ್ ಎಸ್ ಎಸ್ ಪಥಸಂಚಲನದ ವೇಳೆ ಕುಸಿದು ಬಿದ್ದ ಜಯನಗರದ ಮಹೇಂದ್ರ (37) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಗೋಕುಲಂನಲ್ಲಿ ಭಾನುವಾರ ನಡೆದ ಪಥಸಂಚಲನದಲ್ಲಿ ಭಾಗವಹಿಸಿದ್ದ ಮಹೇಶ್ ಕುಸಿದುಬಿದ್ದು ಮೃತಪಟ್ಟಿದ್ದಾರೆ.