Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: : 2027ರ ಐಸಿಸಿ ಏಕದಿನ ವಿಶ್ವಕಪ್‌ ನ ತಾತ್ಕಾಲಿಕ ವೇಳಾಪಟ್ಟಿ ಮತ್ತು ಕ್ರೀಡಾಂಗಣಗಳು ಪ್ರಕಟ! ಇಲ್ಲಿದೆ ಸಂಪೂರ್ಣ ವಿವರ

BREAKING: 2027ರ ಐಸಿಸಿ ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟ | ICC ODI World Cup 2027

NEET-UG ಪರೀಕ್ಷೆ ವರ್ಷಕ್ಕೆ ಒಂದಲ್ಲ, ಹಲವು ಬಾರಿ ನಡೆಸಬೇಕು! ಸಂಸದೀಯ ಸಮಿತಿ ಸದಸ್ಯರ ಮಹತ್ವದ ಸಲಹೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಕಾಯಿಸಿದ ಬಳಿಕ ಹಾಲಿನಲ್ಲಿ `ಪ್ಲಾಸ್ಟಿಕ್’ಮಾದರಿಯ ವಸ್ತು ಪತ್ತೆ : ಆಘಾತಕಾರಿ ವಿಡಿಯೋ ವೈರಲ್ | WATCH VIDEO
INDIA

SHOCKING : ಕಾಯಿಸಿದ ಬಳಿಕ ಹಾಲಿನಲ್ಲಿ `ಪ್ಲಾಸ್ಟಿಕ್’ಮಾದರಿಯ ವಸ್ತು ಪತ್ತೆ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

By kannadanewsnow57

ಇತ್ತೀಚಿನ ದಿನಗಳಲ್ಲಿ ನಾವು ಬಳಸುವ ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಎನ್ನುವುದು ಸಾಮಾನ್ಯ ಎಂಬಂತಾಗಿದೆ. ಅದರಲ್ಲೂ ಹೈನು ಉತ್ಪನ್ನಗಳಲ್ಲಿ ಕಲಬೆರಕೆ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದೆ. ಹೋಟೆಲ್ಗಳಲ್ಲಿ ಬಳಸುವ ಪನೀರ್ ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ಸರ್ಕಾರವೇ ಆದೇಶ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇಂತಹ ಸಂದರ್ಭದಲ್ಲೇ ಮಹಾರಾಷ್ಟ್ರದ ಪುಣೆಯ ದೌಂಡ್ನಲ್ಲಿ ಹಾಲಿನ ಕಲಬೆರಕೆಗೆ ಸಂಬಂಧಿಸಿದ ಬೆಚ್ಚಿಬೀಳಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಾಲನ್ನು ಕಾಯಿಸಿದ ತಕ್ಷಣ ಅದು ಪ್ಲಾಸ್ಟಿಕ್ನಂತೆ ಮಾರ್ಪಟ್ಟಿದೆ.

ನಡೆದಿದ್ದೇನು?

ದೌಂಡ್ ತಾಲ್ಲೂಕಿನ ಪಾಟಸ್ ಎಂಬಲ್ಲಿ ಈ ಘಟನೆ ನಡೆದಿದೆ. ಪಾಟಸ್ ನಿವಾಸಿ ಯುವರಾಜ್ ಅವಹಾಡ್ ಎಂಬುವವರು ಸ್ಥಳೀಯ ಸ್ವೀಟ್ ಹೋಮ್ ಒಂದರಿಂದ ಹಾಲು ಖರೀದಿಸಿದ್ದರು. ಹಾಲನ್ನು ಮನೆಗೆ ತಂದ ಮೇಲೆ ಸ್ವಲ್ಪ ಹೊತ್ತು ಫ್ರಿಡ್ಜ್ನಲ್ಲಿ ಇಟ್ಟು, ನಂತರ ಕಾಯಿಸಲು ಸ್ಟೌ ಮೇಲೆ ಇಟ್ಟಿದ್ದಾರೆ.

ಹಾಲು ಕಾಯುತ್ತಿದ್ದಂತೆ ಅದು ಒಡೆದಂತೆ ಕಂಡರೂ, ಹತ್ತಿರದಿಂದ ಗಮನಿಸಿದಾಗ ಯುವರಾಜ್ ಅವರಿಗೆ ಶಾಕ್ ಕಾದಿತ್ತು. ಹಾಲು ಒಡೆದು ಪ್ಲಾಸ್ಟಿಕ್ ಪದಾರ್ಥವಾಗಿ ಮಾರ್ಪಟ್ಟಿತ್ತು. ಅದರಲ್ಲಿ ದೊಡ್ಡ ದೊಡ್ಡ ಗಡ್ಡೆಗಳು ಉಂಟಾಗಿದ್ದು, ಅದನ್ನು ಎಳೆದರೆ ಚೂಯಿಂಗ್ ಗಮ್ (Chewing gum) ಮಾದರಿಯಲ್ಲಿ ಸಾಲಾಗಿ ಬರುತ್ತಿತ್ತು.

ಸಾರ್ವಜನಿಕರ ಆಕ್ರೋಶ

ಈ ದೃಶ್ಯವನ್ನು ಕಂಡು ದಿಗ್ರಮೆಗೊಂಡ ಯುವರಾಜ್, ತಕ್ಷಣ ನೆರೆಹೊರೆಯವರನ್ನು ಕರೆಸಿ ತೋರಿಸಿದ್ದಾರೆ. ಈ ಭಯಾನಕ ದೃಶ್ಯವನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. “ಪ್ಲಾಸ್ಟಿಕ್ ಮಿಶ್ರಿತ ಇಂತಹ ಕಲಬೆರಕೆ ಹಾಲನ್ನು ಮಾರಾಟ ಮಾಡಿದರೆ ಜನರ ಆರೋಗ್ಯದ ಗತಿಯೇನು?” ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಇಂತಹ ಜೀವವಿರೋಧಿ ಕೆಲಸ ಮಾಡುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಯುವರಾಜ್ ಒತ್ತಾಯಿಸಿದ್ದಾರೆ. ಸದ್ಯ ಈ ಬಗ್ಗೆ ಯಾವುದೇ ಅಧಿಕೃತ ದೂರು ದಾಖಲಾಗದಿದ್ದರೂ, ವೈರಲ್ ಆಗಿರುವ ವಿಡಿಯೋ ನೋಡಿ ಜನರು ಹಾಲು ಖರೀದಿಸಲು ಭಯಪಡುವಂತಾಗಿದೆ.

पुण्यातील दौंडमधील घटना, भेसळयुक्त दुधाचा धक्कादायक प्रकार समोर pic.twitter.com/19zDS1qDmp

— VIRALबाबा (@viralmedia70) May 4, 2026

Share. Facebook Twitter LinkedIn WhatsApp Email

Related Posts

BREAKING: : 2027ರ ಐಸಿಸಿ ಏಕದಿನ ವಿಶ್ವಕಪ್‌ ನ ತಾತ್ಕಾಲಿಕ ವೇಳಾಪಟ್ಟಿ ಮತ್ತು ಕ್ರೀಡಾಂಗಣಗಳು ಪ್ರಕಟ! ಇಲ್ಲಿದೆ ಸಂಪೂರ್ಣ ವಿವರ

2 Mins Read

BREAKING: 2027ರ ಐಸಿಸಿ ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟ | ICC ODI World Cup 2027

2 Mins Read

BREAKING: ​ಒಮಾನ್ ಕರಾವಳಿಯಲ್ಲಿ ಭಾರತೀಯ ನಾವಿಕರಿದ್ದ ಮತ್ತೊಂದು ಹಡಗಿಗೆ ಬೆಂಕಿ: ‘ಎಂವಿ ಜಲವೀರ್’ ಮೇಲಿನ ಪರಿಸ್ಥಿತಿಯ ನಿಗಾ ವಹಿಸಿದ ಭಾರತ!

1 Min Read
Recent News

BREAKING: : 2027ರ ಐಸಿಸಿ ಏಕದಿನ ವಿಶ್ವಕಪ್‌ ನ ತಾತ್ಕಾಲಿಕ ವೇಳಾಪಟ್ಟಿ ಮತ್ತು ಕ್ರೀಡಾಂಗಣಗಳು ಪ್ರಕಟ! ಇಲ್ಲಿದೆ ಸಂಪೂರ್ಣ ವಿವರ

BREAKING: 2027ರ ಐಸಿಸಿ ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟ | ICC ODI World Cup 2027

NEET-UG ಪರೀಕ್ಷೆ ವರ್ಷಕ್ಕೆ ಒಂದಲ್ಲ, ಹಲವು ಬಾರಿ ನಡೆಸಬೇಕು! ಸಂಸದೀಯ ಸಮಿತಿ ಸದಸ್ಯರ ಮಹತ್ವದ ಸಲಹೆ!

BREAKING: ​ಒಮಾನ್ ಕರಾವಳಿಯಲ್ಲಿ ಭಾರತೀಯ ನಾವಿಕರಿದ್ದ ಮತ್ತೊಂದು ಹಡಗಿಗೆ ಬೆಂಕಿ: ‘ಎಂವಿ ಜಲವೀರ್’ ಮೇಲಿನ ಪರಿಸ್ಥಿತಿಯ ನಿಗಾ ವಹಿಸಿದ ಭಾರತ!

State News
KARNATAKA

ಪ್ರಧಾನಿ ಮೋದಿ ಭೇಟಿಯಾದ ಕರ್ನಾಟಕ ಸಿಎಂ ಡಿ.ಕೆ. ಶಿವಕುಮಾರ್: ಕರ್ನಾಟಕದ ಅಭಿವೃದ್ಧಿ ಕುರಿತು ಮಹತ್ವದ ಚರ್ಚೆ

By ವಸಂತ ಬಿ ಈಶ್ವರಗೆರೆ KARNATAKA 1 Min Read

ನವದೆಹಲಿ: ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಡಿ.ಕೆ. ಶಿವಕುಮಾರ್ ಅವರು ಇಂದು ಮೊದಲ ಬಾರಿಗೆ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ…

ದೆಹಲಿಯಲ್ಲಿ ತಿಪಟೂರು ಶಾಸಕ ಕೆ. ಷಡಕ್ಷರಿ ದಿಢೀರ್ ಅಸ್ವಸ್ಥ: ಆಸ್ಪತ್ರೆಗೆ ದಾಖಲಿಸಿ ಆರೋಗ್ಯ ವಿಚಾರಿಸಿದ ಡಿಸಿಎಂ ಜಿ. ಪರಮೇಶ್ವರ್

ಗೃಹಲಕ್ಷ್ಮಿ ಯೋಜನೆಯ ಪರಿಷ್ಕರಣೆಯೇ ಹೊರತು ಸ್ಥಗಿತ ಇಲ್ಲ; ಮೃತ, ಅನರ್ಹರ ಪತ್ತೆಗಷ್ಟೇ ಕ್ರಮ: ದಿನೇಶ್ ಗೂಳಿಗೌಡ ಸ್ಪಷ್ಟನೆ

ಕಲಬುರಗಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಬಾರ್ & ರೆಸ್ಟೋರೆಂಟ್ : ತಪ್ಪಿದ ಭಾರಿ ಅನಾಹುತ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.