ಬಳ್ಳಾರಿ: ಮನೆ ಎದುರಿನ ಚರಂಡಿಗೆ ಬಿದ್ದು ನಾಲ್ಕು ವರ್ಷದ ಮಗುವೊಂದು ದುರಂತ ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಕುರೇಕುಪ್ಪ ಗ್ರಾಮದಲ್ಲಿ ಘಟನೆ ನಡೆದಿದೆ.
ಕುರೇಕುಪ್ಪ ಗ್ರಾಮದಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ನಾಲ್ಕು ವರ್ಷದ ಮಗುವೊಂದು ಚರಂಡಿಯಲ್ಲಿ ಒದ್ದಾಡಿ ಪ್ರಾಣಬಿಟ್ಟಿರುವ ಘಟನೆ ನಡೆದಿದ್ದು, ಇದರ ದೃಶ್ಯ ಸೆರೆಯಾಗಿದೆ. ಮಗು ಕಾಣಿಸದಿದ್ದಾಗ ಪೋಷಕರು ರಾತ್ರಿಯಿಡಿ ಊರಿನಲ್ಲಿ ಹುಡುಕಾಡಿದ್ದಾರೆ. ಕೊನೆಗೆ ಸಿಸಿಟಿವಿ ದೃಶ್ಯ ನೋಡಿದ ನಂತರ ಚರಂಡಿಗೆ ಬಿದ್ದುರುವುದು ತಿಳಿದುಬಂದಿದೆ.
ಮನೆಯ ಮುಂದೆ ಅರವಿಂದ್ ಎನ್ನುವ ಬಾಲಕ ಆಟವಾಡುತ್ತಿದ್ದ. ಈ ವೇಳೆ ಕಾಲು ಜಾರಿ ಚರಂಡಿಗೆ ಬಿದ್ದು ಒದ್ದಾಡಿ ನರಳಾಡಿ ಮಗು ಪ್ರಾಣ ಬಿಟ್ಟಿದೆ. ರಾತ್ರಿ ಇಡಿ ಮಗುವಿಗಾಗಿ ಕುಟುಂಬ ಹುಡುಕಾಡಿದೆ. ಚರಂಡಿಯಲ್ಲಿ ಬಿದ್ದಿದ್ದು ಕುಟುಂಬಸ್ಥರಿಗೆ ಗೊತ್ತಾಗಿಲ್ಲ. ಆದರೆ ಬೆಳಿಗ್ಗೆ ಚರಂಡಿಯಲ್ಲಿ ನೋಡಿದಾಗ ಮಗುವಿನ ಮೃತ ದೇಹ ಪತ್ತೆಯಾಗಿದೆ. ಸದ್ಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.