ಅಭಿರಾಮಪುರಂ : ಚೆನ್ನೈನ ಅಭಿರಾಮಪುರಂ ನಿವಾಸಿ ರಾಧಾಕೃಷ್ಣನ್ ಪುರಂ ದೇವನಾಥನ್ ಅವರಿಗೆ 8 ತಿಂಗಳ ಹೆಣ್ಣು ಮಗುವಿದೆ. ಮಗು ಕಳೆದ ಕೆಲವು ದಿನಗಳಿಂದ ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿತ್ತು ಎಂದು ವರದಿಯಾಗಿದೆ. ಹೀಗಾಗಿ ಜುಲೈ 13ರ ಸಂಜೆ, ದೇವನಾಥನ್ ಮತ್ತು ಅವರ ಕುಟುಂಬ ಸದಸ್ಯರು ಮಗುವಿನ ಮೂಗಿಗೆ ವಿಕ್ಸ್ ಮತ್ತು ಕರ್ಪೂರವನ್ನ ಹಚ್ಚಿದ್ದಾರೆ. ಇದಾದ ಸ್ವಲ್ಪ ಸಮಯದ ನಂತ್ರ ಮಗುವಿಗೆ ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆ ಎದುರಾಯಿತು. ಮಗುವನ್ನ ತಕ್ಷಣ ಎಗ್ಮೋರ್ ಸರ್ಕಾರಿ ಮಕ್ಕಳ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ ತಕ್ಷಣದ ಚಿಕಿತ್ಸೆ ನೀಡಲಾಗಿದ್ದರೂ, ಮಗುವಿನ ಜೀವವನ್ನ ಉಳಿಸಲಾಗಲಿಲ್ಲ. ಚಿಕಿತ್ಸೆ ಪಡೆಯುತ್ತಿರುವಾಗ ಮಗು ಸಾವನ್ನಪ್ಪಿದೆ.
ಮಗುವು ಮೂಗಿನ ಮೇಲೆ ಕರ್ಪೂರ ಬೆರೆಸಿದ ವಿಕ್ಸ್ ಹಚ್ಚಿದ ನಂತರ ಶೀತ ಮತ್ತು ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದೆಯೇ ಅಥವಾ ಬೇರೆ ಯಾವುದೇ ಕಾರಣವಿದೆಯೇ ಎಂಬ ಬಗ್ಗೆ ಅನುಮಾನಗಳಿವೆ. ಶವಪರೀಕ್ಷೆಯ ವರದಿಯ ನಂತ್ರ ನಿಖರವಾದ ಕಾರಣ ತಿಳಿಯಲಿದೆ ಎಂದು ವೈದ್ಯಕೀಯ ಮತ್ತು ಪೊಲೀಸ್ ಮೂಲಗಳು ತಿಳಿಸಿವೆ. ಸಧ್ಯ ಅಭಿರಾಮಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಮಕ್ಕಳಲ್ಲಿ ಶೀತ, ಜ್ವರ ಇತ್ಯಾದಿಗಳಿಗೆ ಮನೆಮದ್ದುಗಳನ್ನ ಬಳಸುವ ಮೊದಲು, ವಿಶೇಷವಾಗಿ ವಿಕ್ಸ್ ಮತ್ತು ಕರ್ಪೂರದಂತಹ ಉತ್ಪನ್ನಗಳನ್ನ ಬಳಸುವ ಮೊದಲು, ವೈದ್ಯರನ್ನ ಸಂಪರ್ಕಿಸಬೇಕು ಎಂದು ವೈದ್ಯರು ಎಚ್ಚರಿಸಿದ್ದಾರೆ. ಕೆಲವು ಮನೆಮದ್ದುಗಳು ಕಾಯಿಲೆಗಳನ್ನ ಗುಣಪಡಿಸಲು ಸಹಾಯ ಮಾಡುತ್ತದೆ. ಆದ್ರೆ, ಮಕ್ಕಳಿಗೆ ನೀಡುವ ಮೊದಲು ವೈದ್ಯರನ್ನ ಸಂಪರ್ಕಿಸುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ.
Watch Video: ದೇಶದ ರಕ್ಷಣಾ ವ್ಯವಸ್ಥೆಗೆ ಮತ್ತಷ್ಟು ಬಲ: ನವೀಕರಿಸಿದ ‘ಆಕಾಶ್ ವೆಪನ್ ಸಿಸ್ಟಮ್’ ಪರೀಕ್ಷೆ ಯಶಸ್ವಿ
ಮಠಾಧೀಶರು ತಮ್ಮ ಸಮುದಾಯದ ವ್ಯಕ್ತಿಗಳ ಓಲೈಕೆ ಸರಿಯಾದ ಕ್ರಮವಲ್ಲ: ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ