ಚೆನ್ನೈ : ಇಂದಿನ ಕಾಲದಲ್ಲಿ, ಅನೇಕ ಜನರು ಫಾಸ್ಟ್ ಫುಡ್’ಗೆ ವ್ಯಸನಿಯಾಗಿದ್ದಾರೆ. ಆದರೆ ಚಿಕನ್ ಫ್ರೈಡ್ ರೈಸ್ ಸೇರಿದಂತೆ ಫಾಸ್ಟ್ ಫುಡ್ ಇಷ್ಟಪಡುವವರು ಈ ಸ್ಟೋರಿ ತಿಳಿಯಲೇಬೇಕು. ಚೆನ್ನೈನಲ್ಲಿ ಒಬ್ಬ ಹುಡುಗಿ ತನ್ನ ಹುಟ್ಟುಹಬ್ಬದಂದು ಚಿಕನ್ ಫ್ರೈಡ್ ರೈಸ್ ತಿಂದು ಸಾವನ್ನಪ್ಪಿದ್ದಾಳೆ . ಮಹೇಂದ್ರನ್ ಮತ್ತು ಪಡುಮೆಗಲ ದಂಪತಿಗಳ ಮಗಳು ಸಂಜನಾ ಖಾಸಗಿ ಶಾಲೆಯಲ್ಲಿ 1ನೇ ತರಗತಿಯಲ್ಲಿ ಓದುತ್ತಿದ್ದು, ಅದೇ ರೋಡ್’ನಲ್ಲಿರುವ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದಳು. ಈ ಘಟನೆಗೆ ಎರಡು ದಿನಗಳ ಮೊದಲು, ಸಂಜನಾಳ ಹುಟ್ಟುಹಬ್ಬವಿತ್ತು. ಹೀಗಾಗಿ ಆಕೆ ತನ್ನ ಹೆತ್ತವರನ್ನ ನೋಡಲು ಚೆನ್ನೈಗೆ ಬಂದಳು.
ಮಗಳ ಹುಟ್ಟುಹಬ್ಬದ ದಿನ, ಕುಟುಂಬವು ಬೀಚ್’ಗೆ ಹೋಗಿತ್ತು, ಅಲ್ಲಿ ಹುಡುಗಿ ಸಂಜನಾ ಚಿಕನ್ ಫ್ರೈಡ್ ರೈಸ್ ತಿಂದಳು. ಸ್ವಲ್ಪ ಸಮಯದ ನಂತರ , ಸಂಜನಾಗೆ ಇದ್ದಕ್ಕಿದ್ದಂತೆ ಜ್ವರ ಬಂದಿತು. ಮನೆಯಲ್ಲಿ ಔೆಷಧ ನೀಡಿದ್ದರೂ ಜ್ವರ ಕಡಿಮೆಯಾಗಲಿಲ್ಲ. ಮರುದಿನ ಆಸ್ಪತ್ರೆಗೆ ಕರೆದೊಯ್ಯುವಾಗ, ಬಾಲಕಿಯ ಬಾಯಿ ಮತ್ತು ಮೂಗಿನಿಂದ ರಕ್ತಸ್ರಾವವಾಗುತ್ತಿತ್ತು. ಗಾಬರಿಗೊಂಡ ಪೋಷಕರು ತಕ್ಷಣ ಆಕೆಯನ್ನ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಬಾಲಕಿಯನ್ನ ಪರೀಕ್ಷಿಸಿದ ವೈದ್ಯರು ಬಾಲಕಿ ಮೃತಪಟ್ಟಿದ್ದಾಳೆಂದು ಘೋಷಿಸಿದರು. ಘಟನೆಯನ್ನು ತಕ್ಷಣವೇ ವಡಪಳನಿ ಪೊಲೀಸರಿಗೆ ವರದಿ ಮಾಡಲಾಯಿತು. ಬಾಲಕಿಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
BREAKING : ಪಾಕಿಸ್ತಾನದ ದೂರಿನ ಮೇರೆಗೆ ‘ಸೂರ್ಯಕುಮಾರ್ ಯಾದವ್’ಗೆ ICC ದಂಡ ವಿಧಿಸುವ ಸಾಧ್ಯತೆ : ವರದಿ
OMG ಇಷ್ಟು ದೊಡ್ಡ ಕಥೆಯಿದ್ಯಾ.? ಕಿಡ್ನಿಯಲ್ಲಿ ಕಲ್ಲು ರೂಪಗೊಳ್ಳಲು ಕಾರಣ ಇದಂತೆ!