ಕೊಪ್ಪಳ: ಮಕ್ಕಳನ್ನು ಒಬ್ಬಂಟಿಯಾಗಿ ಆಟವಾಡಲು ಬಿಡುವ ಪೋಷಕರೇ ಎಚ್ಚರ, ಕೊಪ್ಪಳ ಜಿಲ್ಲೆಯ ಮನ್ನೇರಾಳ ಗ್ರಾಮದಲ್ಲಿ ನೀರಿನ ತೊಟ್ಟಿಯಲ್ಲಿ ಬಿದ್ದು ಮೂರು ವರ್ಷದ ಮಗು ಮೃತಪಟ್ಟಿದೆ.
ಅಪೂರ್ವ ಮಹಾಂತೇಶ ಕರಡಿ (3) ಮೃತಮಗು. ಮನೆಯ ಹತ್ತಿರ ಇರುವ ನೀರಿನ ತೊಟ್ಟಿಯಲ್ಲಿ ಬಿದ್ದ ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಭಾನುವಾರ ಆಗಿದ್ದರಿಂದ ವೈದ್ಯರು ಇರಲಿಲ್ಲ. ಹೀಗಾಗಿ ಇಲಕಲ್ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಮಗು ಮೃತಪಟ್ಟಿದೆ.








