ಚನ್ನಪಟ್ಟಣ : ಪೋಷಕರೇ ಎಚ್ಚರ, ನೀರಿನ ಬಕೆಟ್ ನಲ್ಲಿ ಮುಳುಗಿ 1 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಬೆಂಗಳೂರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣದ ಜೀವನ್ಪುರ ಮೊಹಲ್ಲಾದಲ್ಲಿ ಶಮ್ ಶಾದ್ ಪಠಾಣ್ ಮತ್ತು ಮುಷ್ಕಾನ್ ದಂಪತಿ ಯ ಪುತ್ರಿ ಖುಷಿ ಎಂಬ ಮಗು ನೀರಿನ ಬಕೆಟ್ ನಲ್ಲಿ ಮುಳುಗಿ ಸಾವನ್ನಪ್ಪಿದೆ.
ದಂಪತಿ ಮಧ್ಯಾಹ್ನ ಮಲಗಿದ್ದ ವೇಳೆ ಘಟನೆ ನಡೆದಿದೆ. ಮನೆ ಒರೆಸಲು ಹಾಲ್ನಲ್ಲಿ ನೀರು ತುಂಬಿ ಇಟ್ಟಿದ್ದ ಬಕೆಟ್ನಲ್ಲಿ ಮುಳುಗಿ ಆಟವಾಡುತ್ತಿದ್ದ ಮಗು ಸಾವನ್ನಪ್ಪಿದೆ. ಬಕೆಟ್ ನಲ್ಲಿ ಮಗು ಬಿದ್ದಿರುವುದನ್ನು ನೋಡಿದ ಕೂಡಲೇ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಪರೀಕ್ಷಿಸಿದ ವೈದ್ಯರು ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.