ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಎಲ್ಲರೂ ಹೇಳುತ್ತಾರೆ, ಆದರೆ ಯಾರೂ ಫಾಲೋ ಮಾಡುವುದಿಲ್ಲ. ಹಾಗಾಗಿ ಇಂದು ಧೂಮಪಾನ ಮಾಡುವವರ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳು ವುದಿಲ್ಲ. ಇಂದಿನ ಯುವ ಜನತೆಯಲ್ಲಿ ಇದೊಂದು ಟ್ರೆಂಡ್ ಆಗಿದೆ. ಪುರುಷರಷ್ಟೇ ಮಹಿಳೆಯರು ಕೂಡ ಈ ಒಂದು ಚಟಕ್ಕೆ ಬಲಿಯಾಗುತ್ತಿರುವುದು ವಿಶೇಷ. ಕೆಲವರಿಗಂತು ಗಂಟೆಕೊಮ್ಮೆ ಟೀ ಕುಡಿಯುವ ಹಾಗೆ ಸಿಗರೇಟ್ ಕೂಡ ಸೇವನೆ ಮಾಡುವ ಅಭ್ಯಾಸ ಇರುತ್ತದೆ.
ಅಂದರೆ ಅವರು ಧೂಮಪಾನ ಮಾಡುವುದಕ್ಕೆ ಲೆಕ್ಕವೇ ಇರುವುದಿಲ್ಲ. ದಿನಕ್ಕೆ ಹತ್ತಕ್ಕಿಂತ ಹೆಚ್ಚು ಸಿಗರೇಟ್ ಸೇವನೆ ಮಾಡುತ್ತಾರೆ. ಇದರಿಂದ ಆರೋಗ್ಯಕ್ಕೆ ತೊಂದರೆ ಕಟ್ಟಿಟ್ಟ ಬುತ್ತಿ. ಇಂತಹವರು ಬಹಳ ಬೇಗನೆ ಸಾವಿಗೆ ಹತ್ತಿರವಾಗುತ್ತಾರೆ ಎಂದು ವೈದ್ಯ ಲೋಕ ಹೇಳುತ್ತದೆ. ಹಾಗಾದರೆ ಬನ್ನಿ ಒಂದು ದಿನಕ್ಕೆ 10 ಅಥವಾ ಅದಕ್ಕಿಂತ ಹೆಚ್ಚು ಸಿಗರೇಟ್ ಸೇದುವವರ ಕಥೆ ಏನಾಗುತ್ತದೆ ನೋಡೋಣ.
ಒಳಗಿನ ಅಂಗಾಂಗಗಳು ಹಾನಿ
* ಧೂಮಪಾನ ಮಾಡುವವರು ನೀವೆಲ್ಲ ಗಮನಿಸಿರುವ ಹಾಗೆ ಕಾಯಿಲೆ ಇಲ್ಲದೆ ಬದುಕಲು ಸಾಧ್ಯವೇ ಇಲ್ಲ. ಏಕೆಂದರೆ ಕ್ರಮೇಣವಾಗಿ ಅವರ ದೇಹದ ರೋಗನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಅಷ್ಟೇ ಅಲ್ಲದೆ ಸಿಗರೇಟ್ ಸೇದುವಾಗ ಹೊಗೆ ಒಳ ಭಾಗಕ್ಕೆ ಹೋಗುತ್ತದೆ
* ಇದರಿಂದ ಶ್ವಾಸಕೋಶ ಸೇರಿದಂತೆ ಇನ್ನಿತರ ಒಳಗಿನ ಅಂಗಾಂಗಗಳು ಹಾನಿಗೊಳಾಗುತ್ತವೆ. ಪ್ರಮುಖ ವಾಗಿ ಪಾರ್ಶ್ವವಾಯು ಮತ್ತು ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಸೃಷ್ಟಿಯಾಗುತ್ತವೆ
ಮಾರಕ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ
* ಶ್ವಾಸಕೋಶದ ಕ್ಯಾನ್ಸರ್
* ಹೃದಯದ ಕಾಯಿಲೆ
* ಪಾರ್ಶ್ವವಾಯು
* ಶ್ವಾಸಕೋಶಕ್ಕೆ ಸಂಬಂಧಪಟ್ಟ ಇತರ ಕಾಯಿಲೆ
* ಮಧುಮೇಹ
* ಸಿ ಓ ಪಿ ಡಿ
* ಎಂಫಿಸಮ
* ಟಿ ಬಿ ಕಾಯಿಲೆ
* ಕಣ್ಣುಗಳಿಗೆ ಸಂಬಂಧಪಟ್ಟ ಕಾಯಿಲೆಗಳು
* ರೋಗ ನಿರೋಧಕ ಶಕ್ತಿ ಕಡಿಮೆ ಆಗುವುದು
* ಮೂಳೆಗಳಿಗೆ ಸಂಬಂಧಪಟ್ಟಂತೆ ಆರ್ಥ್ರೈಟಿಸ್ ಸಮಸ್ಯೆ
* ಅತೆರೋಸ್ಲಿರೋಸಿಸ್
ಕೆಲವರಿಗೆ ಅತೆರೋಸ್ಲಿರೋಸಿಸ್ ಸಹ ಬರಬಹುದು. ಅಂದರೆ ಹೃದಯ ರಕ್ತನಾಳಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬಿನ ಅಂಶ ಶೇಖರಣೆಯಾಗಿ ಪಾರ್ಶ್ವವಾಯು ಅಥವಾ ಹೃದಯದ ಕಾಯಿಲೆ ಎದುರಾಗುವ ಸಾಧ್ಯತೆ ಇರುತ್ತದೆ.