ಬೆಂಗಳೂರು: ಬೇಸಿಗೆಯ ಬಿಸಿಲ ಜೊತೆಗೆ, ಈಗ ಬಿಸಿಗಾಳಿಯ ಆಘಾತ ಕೂಡ ಬೆಂಗಳೂರು ಜನತೆಗೆ ತಟ್ಟಲಿದೆ. ಏಪ್ರಿಲ್.30ರ ಇಂದಿನಿಂದ, ಮೇ.5ರವರೆಗೆ ಶಾಖಾಘಾತ ತಟ್ಟಲಿದೆ.
ಈ ಕುರಿತಂತೆ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಬಿಸಿಗಾಳಿ, ಬೇಸಿಗೆಯ ತಾಪಮಾನ ಮುಂದಿನ 48 ಗಂಟೆಗಳ ಕಾಲ ಮುಂದುವರೆಯಲಿದೆ ಎಂದಿದೆ.
ಬೆಂಗಳೂರಲ್ಲಿ ಕಳೆದ ಒಂದು ವಾರದಿಂದ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇನ್ನೂ ಕೆಲವು ದಿನ ಇದೇ ಬಿಸಿಗಾಳಿಯ ವಾತಾವಣ ಮುಂದುವರೆಯಲಿದೆ ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇನ್ನೂ ಏಪ್ರಿಲ್.30ರ ಇಂದಿನಿಂದ ಮೇ.5ರವರೆಗೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣ ಮುಂದುವರೆಯಲಿದೆ ಎಂದು ತಿಳಿಸಿದೆ.
ವಸೂಲಿ ಮಾಡಿದ ‘ಬಡ್ಡಿ’ ಗ್ರಾಹಕರಿಗೆ ಹಿಂದಿಗಿಸಿ ; ಬ್ಯಾಂಕುಗಳಿಗೆ ‘RBI’ ಖಡಕ್ ಎಚ್ಚರಿಕೆ