ಬೆಂಗಳೂರು: ಕೊಳಚೆ ನೀರಿನಲ್ಲಿ ಬೆಂಗಳೂರಿನ ಚೆನ್ನಸಂದ್ರದ ರೈತರು ರಾಜಕಾಲುವೆಗೆ ಪಂಪು ಹಾಕಿಕೊಂಡು ಸೊಪ್ಪು, ತರಕಾರಿ ಬೆಳೆಯುತಿದ್ದಾರೆ ಎನ್ನುವ ಆಘಾತಕಾರಿ ಮಾಹಿತಿ ಹೊರ ಬಿದಿದ್ದೆ.
ರಾಜಕಾಲುವೆ ನೀರಿನಲ್ಲಿ ತರಕಾರಿ, ಸೊಪ್ಪು ಬೆಳೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ನೀರಿನಲ್ಲಿ ವಿಶಕಾರಿ ಅಂಶ ಇದ್ದು, ಇದನ್ನು ಸೇವನೆ ಮಾಡಿದವರ ಆರೋಗ್ಯದ ಮೇಲೆ ಗಂಭಿರ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ. ಇನ್ನೂ ರಾಜಕಾಲುವೆ ನೀರನ್ನು ಬಳಕೆ ಮಾಡಿಕೊಂಡು ತರಕಾರಿ, ಸೊಪ್ಪು ಅನ್ನು ಬೆಳೆಯುತ್ತಿರುವ ರೈತರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಅಂಥ ಸ್ಥಳೀಯ ಜನತೆ ಆಗ್ರಹಿಸುತ್ತಿದ್ದಾರ. ಈ ರೀತಿಯ ಕೊಳಚೆ ನೀರಿನಿಂದ ತರಕಾರಿಯನ್ನು ತಿನ್ನುವುದರಿಂದ ಆರೋಗ್ಯ ಕೆಡುವುದರಲ್ಲಿ ಅನುಮಾನವಿಲ್ಲ.