ಲಕ್ನೋ: ಮೊಬೈಲ್ ಫೋನ್ನಲ್ಲಿ ವೀಡಿಯೊಗಳನ್ನು ನೋಡುತ್ತಿದ್ದ 16 ವರ್ಷದ ಬಾಲಕ ಕುಸಿದು ಬಿದ್ದು ಸಾವನ್ನಪ್ಪಿದ ಆಘಾತಕಾರಿ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಈ ದುರ್ಘಟನೆ ನಡೆದಿದೆ. ಮೃತ ಬಾಲಕನನ್ನು ಅಮನ್ ಖುರೇಷಿ ಎಂದು ಗುರುತಿಸಲಾಗಿದೆ. ಖುರೇಷಿ ಇದ್ದಕ್ಕಿದ್ದಂತೆ ಕುಸಿದು ಹಾಸಿಗೆಯ ಮೇಲೆ ಬಿದ್ದಿದ್ದಾನೆ ಎಂದು ವರದಿಯಾಗಿದೆ. ತಕ್ಷಣ ಅವರನ್ನು ವೈದ್ಯರ ಬಳಿಗೆ ಕರೆದೊಯ್ಯಲಾಯಿತು; ಆದರೆ, ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು. ಬಾಲಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಶಂಕಿಸಲಾಗಿದೆ.
UP : जिला अमरोहा में मात्र 16 साल के अमन कुरैशी की मोबाइल पर Video देखते–देखते मौत हो गई। वो अचानक चारपाई पर लुढ़क गया। डॉक्टर के पास ले गए, तब तक मौत हो चुकी थी। हार्टअटैक से मौत की आशंका है। pic.twitter.com/mTsQhWh0LE
— Sachin Gupta (@SachinGuptaUP) April 22, 2024