ಶಿವಮೊಗ್ಗ : ಕ್ಷಯರೋಗ ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಾಗಿದ್ದು ಭಾರತ ಅವಿಭಕ್ತ ಕುಟುಂಬ ಹೊಂದಿರುವ ದೇಶವಾಗಿರುವುದರಿಂದ ಸಾರ್ವಜನಿಕರು ಹಾಗೂ ಕುಟುಂಬಸ್ಥರು ಈ ಬಗ್ಗೆ ಎಚ್ಚರದಿಂದರಬೇಕು ಎಂದು ಡಿಎಚ್‌ಒ ಡಾ.ನಟರಾಜ್ ಕೆ ಎಸ್ ತಿಳಿಸಿದರು.
ಸೋಮವಾರ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆವರಣದಲ್ಲಿ ವಿಶ್ವ ಕ್ಷಯರೋಗ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಸೈಕಲ್ ಜಾಥಾ ಹಾಗೂ ಕಾಲ್ನಡಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಈ ಬಾರಿ ‘ಹೌದು! ನಾವು ಕ್ಷಯರೋಗವನ್ನು ಕೊನೆಗಾಣಿಸಬಹುದು(ಬದ್ದತೆ, ಹೂಡಿಕೆ, ವಿತರಣೆ) ಎಂಬ ಘೋಷವಾಕ್ಯದೊಂದಿಗೆ ವಿಶ್ವ ಕ್ಷಯ ರೋಗ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ ಎಂದರು.
ಭಾರತದಲ್ಲಿ ಪ್ರತಿ ದಿನ ಸುಮಾರು 6000 ರೋಗಿಗಳಿಗೆ ಕ್ಷಯರೋಗ ಕಂಡುಬರುತ್ತಿದ್ದು, ಇದರಲ್ಲಿ ಸುಮಾರು 600 ಜನ (3 ನಿಮಿಷಕ್ಕೆ 2 ರೋಗಿಗಳು) ಸಾವನ್ನಪ್ಪುತ್ತಿದ್ದಾರೆ. ಕ್ಷಯರೋಗವು ಕೆಮ್ಮುವಾಗ ಮತ್ತು ಸೀನುವಾಗ ತುಂತುರ ಹನಿಗಳಿಂದ ಗಾಳಿಯ ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಹರಡಲಿದೆ. ಸತತ 2 ವಾರಗಳ ಕೆಮ್ಮು ಮತ್ತು ಕಫ, ಸಂಜೆ ಜ್ವರ, ಎದೆನೋವು, ರಾತ್ರಿವೇಳೆ ಬೆವರುವುದು, ತೂಕ ಕಡಿಮೆಯಾಗುವುದು ಹಾಗೂ ಕೆಲವೊಮ್ಮೆ ಕಫದಲ್ಲಿ ರಕ್ತ ಬೀಳುವುದು ಕ್ಷಯರೋಗದ ಮುಖ್ಯ ಲಕ್ಷಣಗಳಾಗಿವೆ ಎಂದರು.
ಟಿ.ಬಿ ನೋಟಿಫಿಕೇಷನ್ ಅಡಿಯಲ್ಲಿ ಈಗಾಗಲೇ ಖಾಸಗಿ ಸಂಸ್ಥೆಗಳಿAದ ಪ್ರತಿ ಮಾಹೆ ವರದಿಗಳನ್ನು ತರೆÀಸಿಕೊಳ್ಳುತ್ತಿದ್ದು, 2024 ರಲ್ಲಿ ಒಟ್ಟು 446 ರೋಗಿಗಳ ವಿವರವು ಖಾಸಗಿ ಸಂಸ್ಥೆಯಿAದ ಬಂದಿದೆ. ಕ್ಷಯರೋಗ ನಿರ್ಮೂಲನೆಗೆ ಶಿವಮೊಗ್ಗ ಜಿಲ್ಲೆ ಆಯ್ಕೆ ಆಗಿದ್ದು, ಟಿ.ಬಿ.ಪ್ರಕರಣಗಳಿರುವ ಮನೆಗಳಲ್ಲಿ ಸಂಪರ್ಕದಲ್ಲಿರುವವರಿಗೆ ಸಿ.ವೈ ಟಿ.ಬಿ ಪರೀಕ್ಷೆ ಮಾಡಿ ಆ ಮೂಲಕ ಸೋಂಕನ್ನು ಕಂಡುಹಿಡಿದು ಟಿ.ಪಿ.ಟಿ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಜಿಲ್ಲೆಯ 86 ಗ್ರಾಮ ಪಂಚಾಯತಿಗಳನ್ನು ಕ್ಷಯರೋಗ ಮುಕ್ತವೆಂದು ಘೋಷಿಸಲಾಗಿದ್ದು, ಇದರಲ್ಲಿ 42 ಗ್ರಾ.ಪಂ ಗಳಿಗೆ ಬೆಳ್ಳಿ ಹಾಗೂ 44 ಗ್ರಾ.ಪಂ ಗಳಿಗೆ ಕಂಚಿನ ಪದಕಗಳನ್ನು ನೀಡಿ ಇಂದು ಜಿಲ್ಲಾಧಿಕಾರಿಗಳು ಪ್ರಶಸ್ತಿಗಳನ್ನು ನೀಡಿದ್ದಾರೆ.
ಜಿಲ್ಲೆಯಲ್ಲಿರುವ ಎಲ್ಲಾ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ, ಶಾಲಾ- ಕಾಲೇಜುಗಳಲ್ಲಿ, ಸಮುದಾಯಗಳಲ್ಲಿ, ಕೊಳಚೆ ಪ್ರದೇಶಗಳಲ್ಲಿ, ಗಣಿಗಾರಿಕೆ ಪ್ರದೇಶಗಳಲ್ಲಿ, ಕಾರ್ಖಾನೆಗಳಲ್ಲಿ, ಹೆಚ್‌ಐವಿ ಬಾಧಿತರಲ್ಲಿ, ಮಧುಮೇಹಿಗಳು ಹಾಗೂ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳು ಇರುವ ಪ್ರದೇಶಗಳಲ್ಲಿ ಕ್ಷಯರೋಗದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮಾಹಿತಿ, ಶಿಕ್ಷಣ ಮತ್ತು ಸಂಪರ್ಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ ಎಂದರು.
ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಬಿ.ಪಿ ನಾಗೇಶ್ ಮಾತನಾಡಿ, 2025 ರ ವೇಳೆಗೆ ಕ್ಷಯರೋಗ ಮುಕ್ತ ಸಮಾಜ ಮಾಡಲು ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗಿದ್ದು, 2024 ರ ಡಿ.7 ರಿಂದ 2025 ರ ಮಾ. 17 ರವರೆಗೆ ಜಿಲ್ಲೆಯಲ್ಲಿ 100 ದಿನಗಳ ತೀವ್ರತರ ಕ್ಷಯರೋಗ ಆಂದೋಲನವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಆಂದೋಲನದಲ್ಲಿ ದುರ್ಬಲ ಆರೋಗ್ಯ ಹೊಂದಿರುವ ಸುಮಾರು 438621 ಶಂಕಿತರನ್ನು ತಪಾಸಣೆ ನಡೆಸಿ, ಇದರಲ್ಲಿ 6672 ಶಂಕಿತರಿಗೆ ಎಕ್ಸ್ ರೇ ಪರೀಕ್ಷೆ ಮಾಡಿ 355 ರೋಗಿಗಳಲ್ಲಿ ಕ್ಷಯರೋಗ ಪತ್ತೆಹಚ್ಚಿ ಡಾಟ್ಸ್ ಚಿಕಿತ್ಸೆ ಪ್ರಾರಂಭಿಸಲಾಗಿದೆ. 2024 ರಲ್ಲಿ 70339 ಶಂಕಿತರಿಗೆ ಕಫ ಪರೀಕ್ಷೆ ಮಾಡಿಸಿ ಅದರಲ್ಲಿ 1398 ಕ್ಷಯರೋಗಿಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗಿದ್ದು, ಜೊತೆಗೆ 54 ಎಂಡಿಆರ್ ರೋಗಿಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ಆರಂಭಿಸಲಾಗಿದೆ ಎಂದರು.
ಕ್ಷಯರೋಗವನ್ನು ಶೀಘ್ರವಾಗಿ ಪತ್ತೆಹಚ್ಚುವ ಅತ್ಯಾಧುನಿಕ ಯಂತ್ರವಾದ ಸಿಬಿಎನ್‌ಎಎಟಿ ಪ್ರಯೋಗಾಲಯವನ್ನು ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ ಹಾಗೂ 10 ಟ್ರ‍್ಯೂನ್ಯಾಟ್ ಯಂತ್ರಗಳನ್ನು ಸಾರ್ವಜನಿಕ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಳವಡಿಸಲಾಗಿದೆ. ಇದರಿಂದ ಟಿ.ಬಿ. ಮತ್ತು ಎಂಡಿಆರ್ ರೋಗಿಗಳ ಶೀಘ್ರ ಪತ್ತೆ ಮತ್ತು ಚಿಕಿತ್ಸೆಗೆ ಅನುಕೂಲವಾಗಿದೆ ಎಂದರು.
ಡಬ್ಲ್ಯೂಎಚ್‌ಓ ಪ್ರತಿನಿಧಿಯಾದ ಡಾ.ರಾಜೀವ್, ಐಎಂಎ ಅಧ್ಯಕ್ಷ ಡಾ.ಶ್ರೀಧರ್, ಟಿಹೆಚ್‌ಓ ಡಾ.ಚಂದ್ರಶೇಖರ್, ಕ್ಷಯರೋಗ ನಿಯಂತ್ರಣ ಮೇಲ್ವಿಚಾರಕ ಎಸ್.ಕುಮಾರ್, ಐಎಂಎ ಸದಸ್ಯರು, ಆರೋಗ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು, ರೋಟರಿ ಪದಾಧಿಕಾರಿಗಳು ಹಾಗೂ ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.