ಬೆಳಗಾವಿ : ಬೆಳಗಾವಿಯ ಕುಡಚಿ ಪಟ್ಟಣದಿಂದ ಹೈದರಾಬಾದ್ ಗೆ ಅಕ್ರಮವಾಗಿ 3 ಟನ್ ಗೋಮಾಂಸ ಸಾಗಿಸುತ್ತಿದ್ದುದು ಬೆಳ ಕಿಗೆ ಬಂದಿದೆ. ಇದನ್ನು ಪತ್ತೆ ಹಚ್ಚಿರುವ ಐನಾಪುರದ ಸ್ಥಳೀಯರು, ಇಡೀ ಲಾರಿಗೆ ಬೆಂಕಿ ಹಚ್ಚಿದ್ದಾರೆ.
ಐನಾಪುರ ಗ್ರಾಮದ ಬಳಿ ಕುಡಚಿ ಪಟ್ಟಣದಿಂದ ಹೈದರಾಬಾದ್ ಕಡೆಗೆ ಸಾಗುತ್ತಿದ್ದ ನಾಲ್ಕು ಲಾರಿಗಳಲ್ಲಿ ಗೋ ಮಾಂಸ ಸಾಗಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ದೊರಕಿದೆ. ಸೋಮವಾರ ರಾತ್ರಿ ಮಾರ್ಗಮಧ್ಯ ಲಾರಿ ತಡೆದು ಪರಿಶೀಲಿಸಿದಾಗ KA71 2045 ಸಂಖ್ಯೆಯ ಲಾರಿಯಲ್ಲಿ ಅಧಿಕ ಪ್ರಮಾಣದ ಗೋ ಮಾಂಸ ಕಂಡುಬಂದಿದ್ದು, ಈ ವೇಳೆ ಲಾರಿಗೆ ಕಲ್ಲು ತೂರಿ, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಅಥಣಿ ಡಿವೈಎಸ್ಪಿ ಮತ್ತು ಕಾಗವಾಡ ಪೊಲೀಸ್ ಠಾಣಾ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಲಾರಿಯಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.







