ಬೆಳಗಾವಿ : ಬೆಳಗಾವಿಯಲ್ಲಿ ಘೋರ ಘಟನೆಯೊಂದು ನಡೆದಿದ್ದು, ಹೆಂಡತಿ ಸರಸಕ್ಕೆ ಬಾರದ ಹಿನ್ನೆಲೆ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಗಂಡನನ್ನು ಪತ್ನಿಯೇ ಕೊಲೆ ಮಾಡಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ಶ್ರೀಮಂತ ಇಟ್ನಾಳ್ ಎಂಬಾತ ಮಗಳ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನುವ ಆರೋಪ ಕೇಳಿಬಂದಿದ್ದು, ಈ ವೇಳೆ ಶ್ರೀಮಂತ ಇಟ್ನಾಳ್ ಪತ್ನಿ ಸಾವಿತ್ರಿ ಗಂಡನ ಕೊಲೆ ಮಾಡಿದ್ದಾಳೆ.
ಒಬ್ಬಳಿಗೆ ಶವ ಸಾಗಿಸಲು ಆಗಲ್ಲ ಎಂದು ದೇಹವನ್ನು 2 ತುಂಡು ಬಾಡಿ ಬ್ಯಾರೆಲ್ ನಲ್ಲಿ ಸಾಗಿಸಿದ್ದಳು. ನಂತರ ಗದ್ದೆಯಲ್ಲಿ ಶವವನ್ನು ಹಾಗೆಯೇ ಜೋಡಿಸಿಟ್ಟು ಹೂತು ಹಾಕಿದ್ದಾಳೆ. ನಂತರ ಆತನ ಬಟ್ಟೆ ಸೇರಿದಂತೆ ಹಲವು ವಸ್ತುಗಳನ್ನು ಸುಟ್ಟು ಹಾಕಿದ್ದಾಳೆ. ಪೊಲೀಸರು ತೀವ್ರ ವಿಚಾರಣೆ ನಡೆಸಿದ ಬಳಿಕ ಆರೋಪಿ ಸಾವಿತ್ರಿ ತಪ್ಪೊಪ್ಪಿಕೊಂಡಿದ್ದಾಳೆ. ಸಾವಿತ್ರಿಯನ್ನು ಚಿಕ್ಕೋಡಿ ಪೊಲೀಸರು ಬಂಧಿಸಿದ್ದಾರೆ.