ಮಿರ್ಜಾಪುರ: ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಹಾಡಹಗಲೇ ವಕೀಲರೊಬ್ಬರನ್ನು ಗುಂಡಿಕ್ಕಿ ಕೊಲ್ಲಲಾದ ಭೀಕರ ಘಟನೆ ನಡೆದಿದೆ. ಇಬ್ಬರು ದುಷ್ಕರ್ಮಿಗಳು ಬೈಕ್ನಲ್ಲಿ ಬಂದು ಈ ಕೃತ್ಯ ಎಸಗಿದ್ದು, ಹತ್ಯೆಯ ನಂತರ ಅವರು ತಪ್ಪಿಸಿಕೊಳ್ಳಲು ಯತ್ನಿಸಿದಾಗ ನಡೆದ ಘಟನೆಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿವೆ.
ನಡೆದಿದ್ದೇನು?
ಈ ಘಟನೆಯು ಕತ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಕತ್ವಾರು ಕಾ ಪುರಾ ಎಂಬ ಪ್ರದೇಶದಲ್ಲಿ ನಡೆದಿದೆ. ಮೃತರನ್ನು ವಕೀಲ ರಾಜೀವ್ ಸಿಂಗ್ ಎಂದು ಗುರುತಿಸಲಾಗಿದೆ. ರಾಜೀವ್ ಸಿಂಗ್ ಅವರು ಶನಿವಾರ ಬೆಳಿಗ್ಗೆ ಎಂದಿನಂತೆ ವಕಿಂಗ್ ಮಾಡುತ್ತಿದ್ದಾಗ, ಬೈಕ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅವರ ಬಳಿ ಗಾಡಿ ನಿಲ್ಲಿಸಿದ್ದಾರೆ.
ಒಬ್ಬ ವ್ಯಕ್ತಿ ಬೈಕ್ ಮೇಲೆಯೇ ಕುಳಿತಿದ್ದರೆ, ಮತ್ತೊಬ್ಬ ವ್ಯಕ್ತಿ ನಾಡಬಂದೂಕಿನೊಂದಿಗೆ ರಾಜೀವ್ ಅವರತ್ತ ನುಗ್ಗಿದ್ದಾನೆ. ಇದನ್ನು ಗಮನಿಸಿ ರಾಜೀವ್ ಸಿಂಗ್ ಅವರು ಪ್ರತಿರೋಧ ತೋರಲು ಯತ್ನಿಸಿದರೂ, ದುಷ್ಕರ್ಮಿ ಅತಿ ಸಮೀಪದಿಂದ ಗುಂಡು ಹಾರಿಸಿದ್ದಾನೆ. ಗುಂಡೇಟು ತಗುಲಿದ ರಾಜೀವ್ ಸಿಂಗ್ ಅವರು ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಟ್ವಿಸ್ಟ್ ಮೇಲೆ ಟ್ವಿಸ್ಟ್!
ರಾಜೀವ್ ಸಿಂಗ್ ಅವರ ಹತ್ಯೆ ಮಾಡಿದ ನಂತರ ಆರೋಪಿಗಳು ಕೂಡಲೇ ಬೈಕ್ ಏರಿ ಪರಾರಿಯಾಗಲು ಯತ್ನಿಸಿದರು. ಆದರೆ, ಆ ಸಮಯದಲ್ಲಿ ಅವರ ಬೈಕ್ ಸ್ಟಾರ್ಟ್ ಆಗದೆ ಕೈಕೊಟ್ಟಿದೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಆರೋಪಿಗಳನ್ನು ಹಿಡಿಯಲು ಧಾವಿಸಿ ಬಂದಿದ್ದಾರೆ.
ಆದರೆ, ಸಿಕ್ಕಿಬೀಳುವ ಭೀತಿಯಲ್ಲಿದ್ದ ದುಷ್ಕರ್ಮಿಗಳು ತಮ್ಮ ಬಳಿಯಿದ್ದ ಬಂದೂಕನ್ನು ತೋರಿಸಿ ಸ್ಥಳೀಯರನ್ನು ಬೆದರಿಸಿದ್ದಾರೆ. ಅಲ್ಲದೆ ಗಾಳಿಯಲ್ಲಿ ಗುಂಡು ಹಾರಿಸಲು ಯತ್ನಿಸಿದಾಗ ಜನ ಹೆದರಿ ಹಿಂದೆ ಸರಿದಿದ್ದಾರೆ. ಈ ಗದ್ದಲದ ನಡುವೆಯೇ ಅಂತಿಮವಾಗಿ ಬೈಕ್ ಸ್ಟಾರ್ಟ್ ಆಗಿದ್ದು, ಆರೋಪಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳು
ಈ ಇಡೀ ಘಟನೆಯು ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಇಂಟರ್ನೆಟ್ನಲ್ಲಿ ಹರಿದಾಡುತ್ತಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
#मिर्जापुर में दिन दहाड़े वकील का लाइव मर्डर, सीसीटीवी वीडियो देखिए
सुबह टहलने के दौरान मोटरसाइकिल सवार व्यक्ति ने देसी तमंचा से मारी गोली, मौके पर अधिवक्ता राजीव सिंह की हुई मौत
कटरा कोतवाली थाना क्षेत्र के कतवारू का पूरा इलाके की घटना #mirzapur #murder #upnews @Uppolice pic.twitter.com/PnGkJkIi9B— Journalist Ravendra kumar (@Chhotukingoffi1) April 11, 2026








