ಸಹರಾನ್ಪುರ: ಶಿಕ್ಷಣ ನೀಡಬೇಕಾದ ಸಂಸ್ಥೆಯಲ್ಲೇ 10 ವರ್ಷದ ಬಾಲಕನೊಬ್ಬನ ಮೇಲೆ ನಡೆದ ಅಮಾನುಷ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶದ ಸಹರಾನ್ಪುರ ಜಿಲ್ಲೆಯ ಗಂಗೋಹ್ ಪೊಲೀಸ್ ಠಾಣಾ ವ್ಯಾಪ್ತಿಯ ಮದರಸಾದಲ್ಲಿ ಈ ಘಟನೆ ನಡೆದಿದೆ.
ಏನಿದು ಘಟನೆ?
ವೈರಲ್ ಆಗಿರುವ ವಿಡಿಯೋದಲ್ಲಿ ಇಬ್ಬರು ಮೌಲಾನಾಗಳು ಸೇರಿ ಪುಟ್ಟ ಬಾಲಕನಿಗೆ ಕ್ರೂರವಾಗಿ ಶಿಕ್ಷೆ ನೀಡುತ್ತಿರುವುದು ಕಂಡುಬಂದಿದೆ. ಸುಮಾರು 30 ಸೆಕೆಂಡ್ ಗಳ ಅವಧಿಯಲ್ಲಿ ಬಾಲಕನಿಗೆ 36 ಬಾರಿ ಬೆತ್ತದಿಂದ ಹೊಡೆಯಲಾಗಿದೆ.
ಒಬ್ಬ ವ್ಯಕ್ತಿ ಬಾಲಕನ ಕಾಲುಗಳನ್ನು ಬಲವಾಗಿ ಹಿಡಿದುಕೊಂಡಿದ್ದರೆ, ಮತ್ತೊಬ್ಬ ಮೌಲಾನಾ ಬಾಲಕನ ಪಾದಗಳಿಗೆ ಮತ್ತು ದೇಹದ ಇತರೆ ಭಾಗಗಳಿಗೆ ಸತತವಾಗಿ ಹೊಡೆಯುತ್ತಾನೆ.ಬಾಲಕನು ನೋವಿನಿಂದ ತಪ್ಪಿಸಿಕೊಳ್ಳಲು ಕಿರುಚುತ್ತಾ, ಒದ್ದಾಡುತ್ತಿದ್ದರೂ ಯಾವುದೇ ಕರುಣೆ ತೋರದೆ ಆತನನ್ನು ಕೆಳಗೆ ಮಲಗಿಸಿ ಪಾದಗಳಿಗೆ ಹೊಡೆಯಲಾಗಿದೆ.ಈ ಇಡೀ ಕೃತ್ಯವನ್ನು ಮೂರನೇ ವ್ಯಕ್ತಿಯೊಬ್ಬರು ಮೊಬೈಲ್ನಲ್ಲಿ ಚಿತ್ರೀಕರಿಸುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ತಿಳಿದುಬಂದಿದೆ.
ಇಬ್ಬರು ಆರೋಪಿಗಳ ಬಂಧನ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಸಹರಾನ್ಪುರ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾದ ಆರೋಪಿ ಮೌಲಾನಾಗಳಾದ ಜುನೈದ್ ಮತ್ತು ಶೋಯೆಬ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಹೇಳಿಕೆ
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಗಳು, “ವಿಡಿಯೋ ಗಮನಕ್ಕೆ ಬಂದ ತಕ್ಷಣ ನಾವು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದೇವೆ. ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುತ್ತಿದ್ದು, ಬಾಲಕನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು,” ಎಂದು ತಿಳಿಸಿದ್ದಾರೆ.
मदरसे में बच्चे को थर्ड डिग्री टॉर्चर
• बच्चे को पहले उल्टा लेटने को कहा गया, फिर उसपर छड़ी से लगातार वार किया गया.
• इतने से मन नहीं भरा तो उसके तलवों पर छड़ी से मारा गया.
पुलिस को ऐसे जल्लादों को यही ट्रीटमेंट देना चाहिए, उसी दर्द का एहसास करना चाहिए.
📍सहारनपुर, यूपी pic.twitter.com/0swvSarzqq
— Ranvijay Singh (@ranvijaylive) April 4, 2026
यूपी | सहारनपुर के मदरसे में 10 साल के बच्चे को बर्बरता से पीटा गया। एक मौलाना ने पैर पकड़े, दूसरे ने 36 डंडे मारे। पुलिस ने जुनैद, शोएब को गिरफ्तार किया। pic.twitter.com/g37wkCbbky
— Sachin Gupta (@Sachingupta) April 4, 2026






