ಅಹಮದಾಬಾದ್ : ಮಂಗಳವಾರ ಗುಜರಾತ್’ನ ವ್ಯಕ್ತಿಯೊಬ್ಬ ಅಹಮದಾಬಾದ್ ಸೆಷನ್ಸ್ ನ್ಯಾಯಾಲಯದ ವಿಚಾರಣೆಯ ವೇಳೆ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದಿದ್ದಾನೆ ಎಂದು ವರದಿಯಾಗಿದೆ. ತಾನು ದಾಖಲಿಸಿದ್ದ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನ ಖುಲಾಸೆಗೊಳಿಸಿದ್ದರಿಂದ ಕೋಪಗೊಂಡ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ. ನ್ಯಾಯಾಲಯ ದೂರು ದಾಖಲಿಸಿಕೊಳ್ಳದಿರಲು ನಿರ್ಧರಿಸಿದ್ದರೂ, ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಶೀಘ್ರದಲ್ಲೇ ಸ್ಥಳಕ್ಕೆ ಆಗಮಿಸಿ ಆ ವ್ಯಕ್ತಿಯನ್ನ ವಶಕ್ಕೆ ಪಡೆದಿದ್ದಾರೆ.
“ಆ ವ್ಯಕ್ತಿಯ ಮೇಲ್ಮನವಿ ವಜಾಗೊಂಡ ನಂತ್ರ ಆ ವ್ಯಕ್ತಿ ಕೋಪಗೊಂಡು ನ್ಯಾಯಾಧೀಶರ ಮೇಲೆ ಶೂ ಎಸೆದರು. ನ್ಯಾಯಾಲಯದ ಸಿಬ್ಬಂದಿ ಅವನನ್ನ ಹಿಡಿದಿದ್ದರೂ, ನ್ಯಾಯಾಧೀಶರು ಅವನನ್ನ ಬಿಟ್ಟುಬಿಟ್ಟರು ಮತ್ತು ಅವನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಸಿಬ್ಬಂದಿಗೆ ಸೂಚಿಸಿದರು” ಎಂದು ನಗರದ ಕರಂಜ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪಿ.ಎಚ್. ಭಾಟಿ ಹೇಳಿದ್ದಾರೆ ಎಂದು ವರದಿಯಾಗಿದೆ.
BREAKING: ಮಹಾಭಾರತದ ಕರ್ಣ ಎಂದೇ ಖ್ಯಾತರಾದ ಪಂಕಜ್ ಧೀರ್ ನಿಧನ | Pankaj Dheer dies
BREAKING: ರಾಜ್ಯದ ‘ಪೊಲೀಸ್ ಇಲಾಖೆ’ಯಲ್ಲಿ ಖಾಲಿ ಇರುವ ‘2032 ಹುದ್ದೆ’ಗಳ ಭರ್ತಿಗೆ ಸರ್ಕಾರ ಆದೇಶ | JOB ALERT
BREAKING: ಶಾಸಕ ವೀರೇಂದ್ರ ಪಪ್ಪಿ ಬಿಗ್ ಶಾಕ್: ED ಬಂಧನ ಕಾನೂನು ಬಾಹಿರವೆಂದು ಘೋಷಿಸಲು ಕೋರಿದ್ದ ಅರ್ಜಿ ವಜಾ