ಹುಬ್ಬಳ್ಳಿ : ಇತ್ತೀಚಿಗೆ ಮಕ್ಕಳಿಂದ ವೃದ್ಧರವರೆಗೂ ಹೃದಯಾಘಾತದ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಹುಬ್ಬಳ್ಳಿಯಲ್ಲಿ ಗ್ರಾಹಕರಿಗೆ ಬಟ್ಟೆ ತೋರಿಸುವಾಗಲೇ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಹುಬ್ಬಳ್ಳಿಯ ಕಂಚಗಾರ ಗಲ್ಲಿಯಲ್ಲಿರುವ ಎನ್ಆರ್ ಸಾರಿ ಸೆಂಟರ್ ನಲ್ಲಿ ಗ್ರಾಹಕರಿಗೆ ಬಟ್ಟೆ ತೋರಿಸುತ್ತಿದ್ದಾಗಲೇ ಬಟ್ಟೆ ಅಂಗಡಿ ಸಿಬ್ಬಂದಿಗೆ ಹೃದಯಾಘಾತವಾಗಿದೆ. ಪರಿಣಾಮವಾಗಿ ಆ ಸಿಬ್ಬಂದಿ ಮೃತಪಟ್ಟಿದ್ದಾರೆ. ಸಿಬ್ಬಂದಿ ಹೃದಯಾಘಾತದಿಂದ ನರಳಾಡುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೃತರನ್ನು 43 ವರ್ಷ ವಯಸ್ಸಿನ ಭವರ್ ಸಿಂಗ್ ಎಂದು ಗುರುತಿಸಲಾಗಿದೆ. ಫೆಬ್ರವರಿ ತಿಂಗಳು 22 ರಂದು ಘಟನೆ ಸಂಭವಿಸಿದೆ.