ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್ನಲ್ಲಿ ಡೊನಾಲ್ಡ್ ಟ್ರಂಪ್ ಅವರ ವಿಚಾರಣೆಯ ಹೊರಗೆ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವರದಿಗಳ ಪ್ರಕಾರ, ನ್ಯೂಯಾರ್ಕ್ನ ಮ್ಯಾನ್ಹ್ಯಾಟನ್ ಕ್ರಿಮಿನಲ್ ನ್ಯಾಯಾಲಯದ ಹೊರಗೆ ಈ ಘಟನೆ ನಡೆದಿದೆ.
ಈ ಘಟನೆಯ ವೀಡಿಯೊ ಕೂಡ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ನ್ಯೂಯಾರ್ಕ್ನಲ್ಲಿ ಡೊನಾಲ್ಡ್ ಟ್ರಂಪ್ ಅವರ ಹಶ್ ಮನಿ ಟ್ರಯಲ್ ಹೊರಗೆ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿಕೊಳ್ಳುತ್ತಿರುವುದನ್ನು ವೈರಲ್ ಕ್ಲಿಪ್ ತೋರಿಸುತ್ತದೆ. “ಫಾಕ್ಸ್ ನ್ಯಾಯಾಲಯದಿಂದ ವರದಿ ಮಾಡುತ್ತಿದ್ದಾಗ ಯಾರೋ ಬೆಂಕಿ ಹಚ್ಚಿಕೊಂಡರು” ಎಂದು ಎಕ್ಸ್ನಲ್ಲಿ ಬಳಕೆದಾರರೊಬ್ಬರು ಹೇಳಿದರು.
NOW – Man just set himself on fire outside of the Trump trial.https://t.co/5Lq4Rkcp8h
— Disclose.tv (@disclosetv) April 19, 2024