ಬೆಂಗಳೂರು: ಬೆಂಗಳೂರಿನಲ್ಲಿ ಮಗುವೊಂದು ಆರ್‌ಎಕ್ಸ್ ಬೈಕ್ ಅನ್ನು ಓಡಿಸಿರುವ ವಿಡಿಯೊವೊಂದು ವೈರಲ್ ಆಗಿದ್ದು, ಈ ಮೂಲಕ ಬೆಂಗಳೂರು ಪೊಲೀಸರ ಕಾರ್ಯವೈಖರಿ ಬಗ್ಗೆ ಪ್ರಶ್ನೆ ಮಾಡಿದೆ.
bhevin_simha ಎನ್ನುವ ಇನ್‌ಸ್ಟಾ ಖಾತೆಯಲ್ಲಿರುವ ಕೆಲವು ವಿಡಿಯೋಗಳು ವೈರಲ್ ಆಗಿದ್ದು, ಬೈಕ್‌ನಲ್ಲಿ ಹಿಂದೆ ಕುಳಿತುಕೊಂಡಿರುವ ವ್ಯಕ್ತಿಯೊಬ್ಬ ಮಗುವೊಂದಕ್ಕೆ ಆಕ್ಸ್‌ಲೇಟರ್ ಅನ್ನು ಜೋರಾಗಿ ಕೊಡುವಂತೆ ಹೇಳುವುದನ್ನು ಕಾಣಬಹುದಾಗಿದೆ. ಅಪಾಯಕಾರಿ ದೃಶ್ಯ ಚಿತ್ರೀಕರಣವಾಗಿ ಒಂದು ವರ್ಷವಾಗುತ್ತು ಬಂದರು ಕೂಡ ಇದು ಬೆಂಗಳೂರು ಪೊಲೀಸರ ಕಣ್ಣಿಗೆ ಬೀಳದೇ ಇರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ಈ ರೀತಿಯ ವಿಡಿಯೋಗಳು ಸರ್ವೆ ಸಾಮಾನ್ಯವಾಗಿದ್ದಾವೆ ಕೂಡ. ವೀಲಿಂಗ್ ನಡೆಸುವವ ಪುಂಡರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಪೊಲೀಸರು ಮಗುವೊಂದಕ್ಕೆ ಬೈಕ್ ಕೊಟ್ಟು ಸಮಾಜಕ್ಕೆ ಕೆಟ್ಟ ಸಂದೇಶವನ್ನ ನೀಡುತ್ತಿರುವ ಈ ವ್ಯಕ್ತಿ ವಿರುದ್ದ ಯಾವ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕಾಗಿದೆ.








